ಮಂಗಳವಾರ, ಏಪ್ರಿಲ್ 29, 2025
HomeautomobileWhich Car is Best : ಯಾವ ಕಾರ್‌ ಬೆಸ್ಟ್‌ ? ಪೆಟ್ರೋಲ್‌, ಡೀಸಲ್‌, ಹೈಬ್ರಿಡ್‌,...

Which Car is Best : ಯಾವ ಕಾರ್‌ ಬೆಸ್ಟ್‌ ? ಪೆಟ್ರೋಲ್‌, ಡೀಸಲ್‌, ಹೈಬ್ರಿಡ್‌, CNG ಅಥವಾ EV?

- Advertisement -

ನಿಮ್ಮ ದಿನನಿತ್ಯದ ಅವಶ್ಯಕ ಓಡಾಟಗಳಿಗೆ ಸರಿಯಾದ ಕಾರ (CAR)ನ್ನು ಆಯ್ಕೆ ಮಾಡುವ ಸಂದಿಗ್ಧತೆ ಇತ್ತೀಚಿನ ದಿನಗಳಲ್ಲಿ ದೊಡ್ಡದಾಗಿದೆ. ಮಾರುಕಟ್ಟೆಯಲ್ಲಂತೂ ವಿವಿಧ ಮಾದರಿಯ (Model) ಕಾರುಗಳು ತುಂಬಿ ತುಳುಕುತ್ತಿವೆ. ಒಂದು ನಿರ್ದಿಷ್ಟ ಮಾದರಿಯ ಶ್ರೇಣಿಯೊಳಗೆ ಒಂದು ವೇರಿಯಂಟ್‌ ಕಾರನ್ನು ಆಯ್ಕೆ ಮಾಡುವುದು ದೊಡ್ಡ ಕೆಲಸವಾಗಿದೆ. ಇಂಧನ ಆಯ್ಕೆ, ಮಾದರಿ, ಎಂಜಿನ್‌, ಹೊಸ ಹೊಸ ವೈಶಿಷ್ಟ್ಯಗಳು ಒಂದೇ, ಎರಡೇ? ಅದಕ್ಕಾಗಿ ನಾವು ಇಲ್ಲಿ ಅವಶ್ಯಕತೆ ಮತ್ತು ಬೆಸ್ಟ್‌ ಕಾರುಗಳ ಬಗ್ಗೆ ಇಲ್ಲಿ ಹೇಳಿದ್ದೇವೆ. ಇಲ್ಲಿ ಹೇಳಿರುವ ಮಾಹಿತಿಗಳು ನೀವು ಸುಲಭವಾಗಿ ಕಾರುಗಳನ್ನು ಆಯ್ಕೆ ಮಾಡಲು ನಿಮಗೆ ಸಹಾಯವಾಗಬಲ್ಲದು.

ಪೆಟ್ರೋಲ್‌ ಮತ್ತು ಡೀಸೆಲ್‌ ಕಾರುಗಳ ಆಯ್ಕೆ :
ಹಳೆಯ ಮಾದರಿಯ ಕಾರುಗಳನ್ನು ಇಷ್ಟ ಪಡುವವರು ಇದನ್ನು ಆಯ್ದು ಕೊಳ್ಳಬಹುದು. IC ಇಂಜಿನ್‌ ವಾಹನಗಳಲ್ಲಿ ಪೆಟ್ರೋಲ್ ಚಾಲಿತ ಕಾರುಗಳು ಉತ್ತಮ ಪವರ್‌ ಡಿಲೇವರಿ ಮತ್ತು ಹೆಚ್ಚಿನ RPM ಹೊಂದಿದ್ದು ಕಾರ್ಯಕ್ಷಮತೆ ಚೆನ್ನಾಗಿದೆ. IC-ಎಂಜಿನ್ ವಾಹನಗಳು ಉತ್ತಮ-ನಿಯಂತ್ರಿತ NVH ಮಟ್ಟವನ್ನು ಸಹ ಹೊಂದಿದೆ. ಆದರೆ ನಿಯಮಿತವಾಗಿ ದೀರ್ಘ ಕಿಲೋಮೀಟರ್‌ ಪ್ರಯಾಣಕ್ಕೆ ‌ಪೆಟ್ರೋಲ್-ಚಾಲಿತ ಕಾರುಗಳ ವೆಚ್ಚ ಸ್ವಲ್ಪ ದುಬಾರಿ ಎಂದ ಸಾಬೀತಾಗಿದೆ.

ಜನರು ಸಾಮಾನ್ಯವಾಗಿ ಇಂಧನ ದಕ್ಷತೆ ಮತ್ತು ಅತ್ಯುತ್ತಮ ಟ್ರಾಕ್ಟಬಿಲಿಟಿ ಗೆ ಡೀಸೆಲ್ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಅದರಲ್ಲೂ ವಿಶೇಷವಾಗಿ ದೀರ್ಘ ಪ್ರಯಾಣದ ಮತ್ತು ಮಾಸಿಕ ಮೈಲೇಜ್ ಬಗ್ಗೆ ಚಿಂತಿಸುವವರು ಇದನ್ನೂ ಆಯ್ದು ಕೋಳ್ಳಬಹುದು. ಇದರ ಜೊತೆಗೆ, ಡೀಸೆಲ್ ಕಾರುಗಳು ಪೆಟ್ರೋಲ್ ಕಾರುಗಳಿಗಿಂತ ಹೆಚ್ಚು ಟಾರ್ಕ್ ಅನ್ನು ನೀಡುತ್ತವೆ. ವಿಶೇಷವಾಗಿ ಕಡಿಮೆ ಮತ್ತು ಮಧ್ಯದ RPM ಗಳಲ್ಲಿ, ದೂರದವರೆಗೆ ಹೆಚ್ಚು ಶ್ರಮವಿಲ್ಲದ ಮತ್ತು ಆರಾಮದಾಯಕ ಚಾಲನೆ ನೀಡುತ್ತವೆ. ಆದರೆ, ತಿಂಗಳಿಗೆ ಕಡಿಮೆ ಬಳಕೆ ಮಾಡುವವರಿಗೆ, ಬೆಲೆ ಮತ್ತು ನಿರ್ವಹಣಾ ವೆಚ್ಚವೂ ಸ್ವಲ್ಪ ಹೆಚ್ಚಿರುವ ಡೀಸೆಲ್ ಕಾರಿನ ಆಯ್ಕೆ ಅಷ್ಟು ಯೋಗ್ಯವಾಗಿಲ್ಲ ಎಂದು ತೋರುತ್ತದೆ.

CNG/LPG :
ದೈನಂದಿನ ಪ್ರಯಾಣಕ್ಕೆ ಮತ್ತು ಇಂಟ್ರಾ-ಸಿಟಿ ರನ್‌ಗಳಲ್ಲಿ ಹೆಚ್ಚಿನ ಮಾಸಿಕ ಬಳಕೆ ಮಾಡುವವರಿಗೆ CNG/LPG ಉತ್ತಮ ಆಯ್ಕೆಯಾಗಬಲ್ಲದು. ಪೆಟ್ರೋಲ್ ಕಾರಿನ ಪರಿಷ್ಕರಣೆ ರೂಪವಾಗಿದ್ದು ಕಾಂಪ್ಯಾಕ್ಟ್, ಸಿಟಿ-ಸ್ನೇಹಿ ಕಾರ್‌ ಆಗಿದೆ. ಇವು ಪರ್ಯಾಯ ಇಂಧನಗಳೂ ಆಗಿವೆ. CNG/LPG ಕಾರು ಶಕ್ತಿ ಮತ್ತು ಕಾರ್ಯಕ್ಷಮತೆಯಲ್ಲಿ ಕಡಿಮೆ ಇರಬಹುದು ಆದರೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಸಿದರೆ ನಿಮ್ಮ ಹಣ ಉಳಿಸಬಲ್ಲವಾಗಿವೆ. ಆದರೂ ,ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೋಲಿಸಿದರೆ, ಸಿಎನ್‌ಜಿ ಮತ್ತು ಎಲ್‌ಪಿಜಿ ಇಂಧನ ಲಭ್ಯತೆ ವ್ಯಾಪಕವಾಗಿಲ್ಲ. ಇದು ನಗರ ಬಳಕೆಗೆ ಮಾತ್ರ ಉತ್ತಮವಾಗಿದೆ. CNG/LPG ಕಾರುಗಳಲ್ಲಿ ಉತ್ತಮ ಎಂದರೆ ಮಾರುತಿ ಸುಜುಕಿ ಎರ್ಟಿಗಾ S-CNG, ಹುಂಡೈ ಔರಾ CNG, ಟಾಟಾ ಟಿಯಾಗೊ iCNG ಗಳಾಗಿವೆ.

ಎಲೆಕ್ಟ್ರಿಕ್ ವಾಹನ :
ಎಲೆಕ್ಟ್ರಿಕ್ ಕಾರನ್ನು ಓಡಿಸುವುದು ನಿಮ್ಮ ಜೇಬಿನಲ್ಲಿರುವ ಹಣದ ಉಳಿತಾಯ ಎಂಬುದರಲ್ಲಿ ಸಂದೇಹವಿಲ್ಲ. ಅವುಗಳ ನಿಯಮಿತ ನಿರ್ವಹಣಾ ಶುಲ್ಕಗಳು ಸಹ ಬೇಡಿಕೆಯ IC-ಎಂಜಿನ್ ಕಾರುಗಳ ಒಂದು ಭಾಗ ಮಾತ್ರವಾಗಿದೆ. ಆದರೆ, ದೇಶದಲ್ಲಿ ಇತ್ತೀಚೆಗಷ್ಟೆ ಆರಂಭವಾಗಿದ್ದರಿಂದ ಅದರ ಬೆಲೆ, ನಿರ್ವಹಣೆ ಮತ್ತು ಸೀಮಿತ ಚಾರ್ಜಿಂಗ್‌ ವ್ಯವಸ್ಥೆ ಪ್ರಯಾಣದಲ್ಲಿರುವಾಗ ಅಡೆತಡೆ ಉಂಟುಮಾಡಬಹುದು. ಹೀಗಾಗಿ, ಈ ಕ್ಷಣಕ್ಕೆ, IC-ಎಂಜಿನ್ ವಾಹನವನ್ನು ಹೊಂದಿರುವವರು ಮತ್ತು ಇಂಟ್ರಾ-ಸಿಟಿ ಬಳಕೆಗಾಗಿ ಸೆಕೆಂಡರಿ ಕಾರನ್ನು ಬಯಸುವವರು ಎಲೆಕ್ಟ್ರಿಕ್ ವಾಹನವನ್ನು ಆರಿಸಿಕೊಳ್ಳಬಹುದು. ಉತ್ತಮ ಎಲೆಕ್ಟ್ರಿಕ್‌ ಕಾರುಗಳು: Tata Nexon EV, MG ZS EV, ಹ್ಯುಂಡೈ ಕೋನಾ EV, Audi etron.

ಪೂರ್ಣ-ಹೈಬ್ರಿಡ್ :
ಇತರ ಕಾರುಗಳಿಗಿಂತ ಅಧಿಕ ನಿರ್ವಹಣೆಯ ಅಗತ್ಯವಿರುವ ಸಂಪೂರ್ಣ-ಹೈಬ್ರಿಡ್ ವಾಹನಗಳು ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನ ಹೊಂದಿದೆ. ಆದರೆ, ಪೆಟ್ರೋಲ್ ಕಾರಿನ ಸುಲಭ, ಸೌಕರ್ಯ ಮತ್ತು ಪರಿಷ್ಕರಣೆಗೆ ಹೆಚ್ಚು ಆದ್ಯತೆ ನೀಡುವವರು ಮತ್ತು ಹೆಚ್ಚಿನ ಇಂಧನ ಆರ್ಥಿಕತೆಯನ್ನು ಬಯಸುವವರು ಪೂರ್ಣ-ಹೈಬ್ರಿಡ್ ಕಾರುಗಳ ಮೊರೆ ಹೋಗಬಹುದು. ಪೂರ್ಣ-ಹೈಬ್ರಿಡ್ ಕಾರು ಜನರಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಅವಲಂಬಿಸದೆ, ವಿದ್ಯುತ್ ಚಲನಶೀಲತೆಗೆ ಬದಲಾಯಿಸುವ ಅವಕಾಶವನ್ನು ನೀಡುತ್ತದೆ. ಉತ್ತಮ ಪೂರ್ಣ–ಹೈಬ್ರಿಡ್‌ ಕಾರುಗಳು: ಹೋಂಡಾ ಸಿಟಿ e:HEV, ಟೊಯೋಟಾ ಕ್ಯಾಮ್ರಿ,ಟೊಯೋಟಾ ವೆಲ್‌ಫೈರ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್,

ಇದನ್ನೂ ಓದಿ : Maruti Brezza : ಸ್ಪೆಷಲ್ ಫೀಚರ್ಸ್‌, ಕೇವಲ 11 ಸಾವಿರಕ್ಕೆ ಬುಕ್‌ ಮಾಡಿ ಹೊಸ ಮಾರುತಿ ಬ್ರೆಝಾ

ಇದನ್ನೂ ಓದಿ : Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

which car is best? Petrol, Diesel, Hybrid, CNG or EV

RELATED ARTICLES

Most Popular