ತೆರಿಗೆದಾರರಿಗೆ ಬಿಗ್ ರಿಲೀಫ್ ನೀಡುತ್ತೆ ಕೇಂದ್ರ ಬಜೆಟ್ !

0

ನವದೆಹಲಿ : ಕೇಂದ್ರ ಬಜೆಟ್ 2020ಕ್ಕೆ ದಿನಗಣನೆ ಆರಂಭವಾಗಿದ್ದು, ಆದಾಯ ತೆರಿಗೆ ಪಾವತಿದಾರರಿಗೆ ಈ ಬಾರಿಯ ಬಜೆಟ್ ನಲ್ಲಿ ಭಾರಿ ರಿಲೀಫ್ ಕೊಡಲಿದೆ ಕೇಂದ್ರ ಸರ್ಕಾರ. ಅದರಲ್ಲೂ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದ್ದು, ಆದಾಯದ ಮಿತಿಯನ್ನು ಹೆಚ್ಚಿಸುವ ಕ್ರಮಕ್ಕೆ ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಜಾರಿಯಲ್ಲಿರುವ ಆದಾಯ ತೆರಿಗೆ ವ್ಯವಸ್ಥೆ ಪ್ರಕಾರ, 2.5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಯಾವುದೇ ವೈಯಕ್ತಿಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 5, 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 20, 10 ಲಕ್ಷ ರೂಪಾಯಿಗೂ ಹೆಚ್ಚು ಆದಾಯಕ್ಕೆ ಶೇಕಡ 30 ತೆರಿಗೆ ಪಾವತಿಸಬೇಕಾಗಿದೆ. ಇದಲ್ಲದೆ, 50 ಲಕ್ಷ ರೂಪಾಯಿಗೂ ಅಧಿಕ ಆದಾಯ ಹೊಂದಿದವರಿಗೆ ಸರ್ಚಾರ್ಜನ್ನೂ ಸರ್ಕಾರ ವಿಧಿಸುತ್ತಿದೆ.
ಕಳೆದ ಬಾರಿಯ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯನ್ನು ಸರಕಾರ ಘೋಷಿಸಿತ್ತು. ಆದ್ರೆ ಈ ಬಾರಿಯ ಬಜೆಟ್ ನಲ್ಲಿ ಶೇಕಡ 5ರ ತೆರಿಗೆ ಸ್ಲ್ಯಾಬ್​ನ ಆದಾಯ ಮಿತಿಯನ್ನು 7 ಲಕ್ಷ ರೂಪಾಯಿಗೂ, ಶೇಕಡ 10ರ ತೆರಿಗೆಯ ಸ್ಲ್ಯಾಬ್​ನ ಆದಾಯ ಮಿತಿ 7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕವೂ ಆಗುವ ಸಾಧ್ಯತೆ ಇದೆ.

Leave A Reply

Your email address will not be published.