ನವದೆಹಲಿ : ಅದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಎಎ 41ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲವಾಗಿರುವ ಸುಮಾರು 17 ಕೋಟಿ ಪಾನ್ ಕಾರ್ಡ್ ನ್ನು ರದ್ದುಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

ನಕಲಿ ಪಾರ್ನ್ ಕಾರ್ಡ್ಗಳಿಗೆ ಕಡಿವಾಣ ಹಾಕುವುದಲ್ಲದೆ ತೆರಿಗೆ ವಂಚನೆ ಹಾಗೂ ಸಾರ್ವಜನಿಕ ಹಣ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಹೇಳಿತ್ತು. ಆದರೆ ಆದಾಯ ತೆರಿಗೆ ನೀಡಿದ್ದ ಅವಧಿ ಮುಗಿದು ಹೋಗಿದ್ದು, ಇದೀಗ ಮಾರ್ಚ್ 31ರ ಒಳಗಾಗಿ ಕಡ್ಡಾಯವಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡೋದಕ್ಕೆ ಗಡುವು ನೀಡಿದೆ.

ಜನವರಿ ಅಂತ್ಯದ ವೇಳೆಗೆ 30.75 ಕೋಟಿ ಪಾನ್ ಕಾರ್ಡ್ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ. ಇನ್ನು 17.58 ಕೋಟಿ ಜನರು ಲಿಂಕ್ ಮಾಡಿಲ್ಲ. ಅದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಎಎ 41ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲನಾದ ವ್ಯಕ್ತಿಯ ಪಾನ್ ಕಾರ್ಡ್ ಅನ್ನು ನಿಯಮಸಾರ ಅಸಿಂಧುಗೊಳಿಸಲಾಗುವುದು ಆದಾಯ ತೆರಿಗೆ ಹೇಳೀದೆ.

ಆದಾಯ ತೆರಿಗೆ ಇಲಾಖೆ ನೀಡಿರುವ ಗಡುವಿನ ಒಳಗೆ ಪಾನ್ಗೆ ಆಧಾರ್ ಲಿಂಕ್ ಜೋಡನೆ ಮಾಡದೇ ಹೋದಲ್ಲಿ ಹಣಕಾಸು ಕಾಯಿದೆ 2019 ರ ಅಧಿಕೃತ ಘೋಷಣೆ ಬಳಿಕ ಅಸಿಂಧುಗೊಳಿಸುವ ಅಧಿಕಾರ ಅದಾಯ ತೆರಿಗೆ ಇಲಾಖೆಗೆ ಸಿಗಲಿದೆ. ಹೀಗಾಗಿ ನೀವೇನಾದ್ರೂ ಆಧಾರ್ ಪಾನ್ ಲಿಂಕ್ ಮಾಡದೇ ಇದ್ರೆ ನಿಮ್ಮ ಪಾನ್ ಕಾರ್ಡ್ ರದ್ದಾಗಲಿದೆ.