ಮಂಗಳೂರು ಬಾಂಬ್ ಪತ್ತೆ ಪ್ರಕರಣ : ಸರಕಾರಕ್ಕೆ ಸುದೀರ್ಘ ವರದಿ ಸಲ್ಲಿಕೆ

0

ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ರಾಜ್ಯ ಸರ್ಕಾರಕ್ಕೆ ಸುದೀರ್ಘ ವರದಿ ಸಲ್ಲಿಸಿದ್ದು, ವರದಿ ಸಂಜೆಯೊಳಗೆ ಕೇಂದ್ರ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನೆಯಾಗೋ ಸಾಧ್ಯತೆಯಿದೆ.
ಮಂಗಳೂರು ಪೊಲೀಸರ ವಶದಲ್ಲಿರುವ ಬಾಂಬ್ ಆದಿತ್ಯರಾವ್ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಇಂದು ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಂಗರ್ ಪ್ರಿಂಟ್ ಸಂಗ್ರಹಿಸಿ, ಎಲ್ಲ ವಿಧದಲ್ಲೂ ತನಿಖಾಧಿಕಾರಿಗಳು ಫೋಟೋ ತೆಗೆದಿದ್ದಾರೆ. ಮಂಗಳೂರು ಏರ್ ಪೋರ್ಟ್ ಮಾತ್ರವಲ್ಲದೇ ಆದಿತ್ಯರಾವ್ ಕೆಲಸ ಮಾಡಿದ ಸ್ಥಳಗಳಲ್ಲೂ ಮಹಜರು ಕಾರ್ಯ ನಡೆಸಲಿದ್ದಾರೆ

Leave A Reply

Your email address will not be published.