Home Remedies For Acidity :ನಮ್ಮಲ್ಲಿ ಏನಾದರೊಂದು ಕಾರ್ಯಕ್ರಮ ಇಲ್ಲವೇ ಔತಣ ಕೂಟಗಳು ಆಯ್ತು ಅಂದರೆ ಸಾಕು ಭೂರಿ ಭೋಜನಕ್ಕೇನು ಕಡಿಮೆ ಇರೋದಿಲ್ಲ. ಅತಿಥಿಗಳು ಹಾಗೂ ಸಂಬಂಧಿಗಳ ಜೊತೆ ಹರಟೆ ಹೊಡೆಯುತ್ತಾ ಹೊಟ್ಟೆಗೆ ಎಷ್ಟು ಆಹಾರ ಹೋಯ್ತು ಅನ್ನೋದೇ ನೆನಪಿರೋದಿಲ್ಲ. ಆದರೆ ಅತಿಯಾದ ತಿನ್ನುವಿಕೆಯಿಂದ ಒಮ್ಮೊಮ್ಮೆ ಆ್ಯಸಿಡಿಟಿ ಉಂಟಾಗಬಹುದು. ಎಣ್ಣೆಯುಕ್ತ ಆಹಾರಗಳನ್ನು , ಅಥವಾ ಜೀರ್ಣವಾಗದಂತಹ ಆಹಾರಗಳನ್ನು ಅತಿಯಾಗಿ ಸೇವಿಸಿದಾಗ ನಿಮಗೆ ಆ್ಯಸಿಡಿಟಿ ಉಂಟಾಗುತ್ತದೆ. ಇದರಿಂದ ನೀವು ಪಾರಾಗಬೇಕು ಅಂದರೆ ಕೆಲವು ಮನೆ ಮದ್ದುಗಳನ್ನು ಬಳಕೆ ಮಾಡಬಹುದು.
ಸೋಂಪು ಅಥವಾ ಬಡೆಸೊಪ್ಪು : ನಮ್ಮಲ್ಲಿ ಊಟದ ನಂತರ ಸೋಂಪನ್ನು ತಿನ್ನುವ ಅಭ್ಯಾಸವಿದೆ. ಇದು ನಿಜಕ್ಕೂ ಒಳ್ಳೆಯ ಅಭ್ಯಾಸ. ಊಟದ ಬಳಿಕ ನೀವು ಸೋಂಪನ್ನು ಸೇವನೆ ಮಾಡಿದಲ್ಲಿ ಆ್ಯಸಿಡಿಟಿ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಹೀಗಾಗಿ ನೀವು ಭರ್ಜರಿ ಊಟದ ಬಳಿಕ ಒಂದು ಚಮಚ ಸೋಂಪು ಅಥವಾ ಸೋಂಪು ಚಹವನ್ನು ಮಾಡಿ ಸೇವಿಸುವ ಮೂಲಕ ಆ್ಯಸಿಡಿಟಿಯಿಂದ ಮುಕ್ತಿ ಹೊಂದಬಹುದಾಗಿದೆ.
ಬೆಲ್ಲ : ನಮ್ಮಲ್ಲಿ ಊಟದ ಕೊನೆಯಲ್ಲಿ ಸಿಹಿ ಪದಾರ್ಥವನ್ನು ನೀಡುವ ಪದ್ಧತಿಯೊಂದಿದೆ. ಇದು ನಿಮಗೆ ಆ್ಯಸಿಡಿಟಿಯಂತಹ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಬೆಲ್ಲವು ನಿಮ್ಮ ಕರುಳಿನ ಶಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಇದರಿಂದ ನಿಮಗೆ ಜೀರ್ಣಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಉಂಟಾಗೋದಿಲ್ಲ.
ತಣ್ಣನೆಯ ಹಾಲು : ಒಂದು ಲೋಟ ತಣ್ಣನೆಯ ಹಾಲು ಸೇವಿಸುವ ಮೂಲಕ ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ. ಹೀಗಾಗಿ ನೀವು ಆ್ಯಸಿಡಿಟಿ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿದ ಕೂಡಲೇ ತಣ್ಣನೆಯ ಹಾಲನ್ನು ಸೇವನೆ ಮಾಡುವುದು ಉತ್ತಮ.
ಮೊಸರು : ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಲು ನೀವು ಬಳಕೆ ಮಾಡಬಹುದಾದ ಮತ್ತೊಂದು ಡೈರಿ ಪದಾರ್ಥವೆಂದರೆ ಮೊಸರು. ಮೊಸರು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುವ ಕಾರ್ಯ ಮಾಡುವುದರಿಂದ ನೀವು ಊಟದ ಕೊನೆಯಲ್ಲಿ ಮೊಸರು ಸೇವನೆ ಮಾಡಿದಲ್ಲಿ ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.
ಎಳನೀರು : ಬೇಸಿಗೆ ಸಮಯದಲ್ಲಿ ಎಳನೀರು ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ. ನೀವು ಎಳನೀರನ್ನು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿರುವ ಪಿಹೆಚ್ ಆ್ಯಸಿಡಿಕ್ ಲೆವೆಲ್ ಅಲ್ಕಲಿನ್ ಆಗಿ ಮಾರ್ಪಾಡಾಗುತ್ತದೆ. ಇದರಿಂದ ನಿಮ್ಮ ಆ್ಯಸಿಡಿಟಿ ಸಮಸ್ಯೆ ವಾಸಿಯಾಗುತ್ತದೆ.
ಇದನ್ನು ಓದಿ : Postpone periods: ಮಾತ್ರೆ ಸೇವಿಸದೇ ಮುಟ್ಟಿನ ದಿನವನ್ನು ಮುಂದೂಡಲು ಇಲ್ಲಿದೆ ಮಾರ್ಗ !
ಇದನ್ನೂ ಓದಿ : constipation in children : ಮಕ್ಕಳು ಮಲಬದ್ಧತೆಯಿಂದ ಬಳಲುತ್ತಿದ್ದಾರೆಯೇ ? ಇಲ್ಲಿದೆ ಮನೆಮದ್ದು
5 Home Remedies For Relief From Acidity