ಮಂಗಳೂರು : ಇಬ್ಬರು ಯುವತಿಯರು ಅನ್ಯಕೋಮಿನ ಮೂವರು ಯುವಕರ ಜೊತೆಗೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರು ಹೊರವಲಯದ ಎಕ್ಕಾರು ಸಮೀಪದ ಕಲ್ಲಿನ ಕೋರೆಯ ಬಳಿಯಲ್ಲಿ ನಡೆದಿದೆ.

ಇಬ್ಬರು ಯುವತಿಯರು ಹಾಗೂ ಮೂವರು ಯುವಕರು ಕಲ್ಲಿನ ಕೋರೆಯ ಬಳಿಯಲ್ಲಿ ಚಕ್ಕಂದವಾಡುತ್ತಿದ್ದಾರೆ ಅನ್ನೋ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ರಾಮಸೇನಾ ಶಿವಾಜಿ ಘಟಕದ ಕಾರ್ಯಕರ್ತರು ಯುವಕ ಯುವತಿಯನ್ನು ಬಜಪೆ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂವರು ಯುವಕರು ಕೂಡ ಮಂಗಳೂರಿನವರಾಗಿದ್ದು, ಇಬ್ಬರು ಯುವತಿಯರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಪೊಲೀಸರು ಈ ಕುರಿತು ವಿಚಾರಣೆಯನ್ನು ನಡೆಸುತ್ತಿದ್ದಾರೆ.