ಬೆಂಗಳೂರು: actress chetna raj died : ಫ್ಯಾಟ್ ಸರ್ಜರಿಗೆ ಒಳಗಾಗಲು ಹೋಗಿ ಜೀವವನ್ನೇ ಕಳೆದುಕೊಂಡ ನಟಿ ಚೇತನಾ ರಾಜ್ ಅದೆಷ್ಟೊ ಮಂದಿ ತಾರೆಯರ ಪಾಲಿಗೆ ಎಚ್ಚರಿಕೆಯ ಘಂಟೆಯಾಗಿ ನಿಂತಿದ್ದಾರೆ. ಶಾರ್ಟ್ಕಟ್ನಲ್ಲಿ ದೇಹದ ತೂಕ ಇಳಿಸಲು ಹೋದರೆ ಅದು ಯಾವೆಲ್ಲ ರೀತಿಯಲ್ಲಿ ಸಂಕಷ್ಟ ತಂದೊಡ್ಡಬಹುದು ಎಂಬುದು ಇದೀಗ ಬಹುತೇಕರಿಗೆ ಮನವರಿಕೆ ಆದಂತಾಗಿದೆ. ಈ ಎಲ್ಲದರ ನಡುವೆ ಕಿರುತೆರೆ ನಟಿ ಚೇತನಾ ರಾಜ್ರಿಗೆ ಈ ಚಿಕಿತ್ಸೆಯನ್ನು ನೀಡಿದ್ದ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ಗೆ ಆರೋಗ್ಯ ಇಲಾಖೆಯು ಬೀಗ ಜಡಿದಿದೆ.
ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಗೋಳೂರು ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ನೀಡಿದ್ದು ಒಂದು ದಿನದ ಒಳಗಾಗಿ ನೋಟಿಸ್ಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಯಲ್ಲಿ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕೂಡ ಆಸ್ಪತ್ರೆಯ ಸಾಹೇಬ್ ಶೆಟ್ಟಿ ಗೌಡ ಸೇರಿದಂತೆ ನಾಲ್ವರಿಗೆ ನೋಟಿಸ್ ಕಳುಹಿಸಿದ್ದು ಇಂದು ಮಧ್ಯಾಹ್ನ 12 ಗಂಟೆಯ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನವರಂಗ್ ಸಿಗ್ನಲ್ನಲ್ಲಿರುವ ಕಾಸ್ಮೆಟಿಕ್ ಸೆಂಟರ್ಗೆ ಪಾಲಿಕ್ಲಿನಿಕ್ ಹಾಗೂ ಡಿಸ್ಪೆನ್ಸರಿಗೆ ಮಾತ್ರ ಅನುಮತಿ ನೀಡಲಾಗಿದೆ. ಕಾಸ್ಮೆಟಿಕ್ ಸೆಂಟರ್ಗಳಲ್ಲಿ ಆಪರೇಷನ್ಗಳನ್ನು ನಡೆಸಲು ಅನುಮತಿ ನೀಡಲಾಗುವುದಿಲ್ಲ. ಪಾಲಿಕ್ಲಿನಿಕ್ ಪರವಾನಿಗಿ ಹೊಂದಿದವರು ಆಪರೇಷನ್ಗಳನ್ನು ಮಾಡುವಂತಿಲ್ಲ. ಆದರೆ ಈ ಎಲ್ಲ ಆದೇಶಗಳನ್ನು ಗಾಳಿಗೆ ತೂರಿದ್ದ ಶೆಟ್ಟಿಸ್ ಕಾಸ್ಮೆಟಿಕ್ ಸೆಂಟರ್ನಲ್ಲಿ ಕಿರುತೆರೆ ನಟಿ ಚೇತನಾ ರಾಜ್ರ ಸೊಂಟದ ಭಾಗದಲ್ಲಿ ಕೊಬ್ಬನ್ನು ತೆಗೆಯುವ ಕೆಲಸ ಮಾಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ಬಳಿಕ ಚೇತನಾ ರಾಜ್ ಶ್ವಾಸಕೋಶದಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : North Korea : ಕೋವಿಡ್ -19 ಪತ್ತೆಯಾಗಿ ಒಂದೇ ವಾರ : ಉತ್ತರ ಕೊರಿಯಾದಲ್ಲಿ 20 ಲಕ್ಷ ಶಂಕಿತ ಕೋವಿಡ್ ಪ್ರಕರಣ ಪತ್ತೆ
ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ
actress chetna raj died during fat surgery bengaluru subramanya police issued notice for hospital and employees