ಬೈಂದೂರು : ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ರಕ್ಷಿತಾ (22 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿನಿ. ಉದ್ಯಾವರದ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಎಮ್ ಎಸ್ ಪದವಿಯನ್ನು ಪೂರೈಸಿದ್ದಳು. ಪರೀಕ್ಷೆಯ ನಂತರದಲ್ಲಿ ಆಕೆ ಮನೆಯಲ್ಲಿಯೇ ಉಳಿದುಕೊಂಡಿದ್ದಳು.
ಇತ್ತೀಚೆಗೆ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಒಂದು ವಿಷಯದಲ್ಲಿ ಅನುತೀರ್ಣ ಗೊಂಡಿದ್ದು, ಇದರಿಂದ ಸಾಕಷ್ಟು ಮನನೊಂದಿದ್ದಳು ಎನ್ನಲಾಗುತ್ತಿದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.