ಬೆಂಗಳೂರು : ಐತಿಹಾಸಿಕ ಬೆಂಗಳೂರು ಕರಗ ಆಚರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಲಾಕ್‌ಡೌನ್ ಆದೇಶ ಜಾರಿಯಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇದೆ. ನಿಷೇದಾಜ್ಞೆ ಜಾರಿಯಲ್ಲಿರುವ ಕಾರಣ ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳಿಗೆ ಅನುಮತಿ ನೀಡುವಂತೆ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಬೆಂಗಳೂರು ಕರಗವನ್ನ ಸರಳವಾಗಿ ಆಚರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು, ಆದರೆ ಆಚರಣೆ ಸಮಯದಲ್ಲಿ ಸಾರ್ವಜನಿಕರು ಭಾಗಿಯಾಗುತ್ತಾರೆ. ಜನ ಜಂಗುಳಿಯಲ್ಲಿ ಕೊರೋನಾ ಹರಡುವ ಸಾಧ್ಯತೆಯಿದ್ದು, ಹೀಗಾಗಿ ಬೆಂಗಳೂರು ಕರಗ ಆಚರಣೆ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ.

ಕೊರೋನಾ ನಿಯಂತ್ರಣಕ್ಕಾಗಿ ದೇಶಾದ್ಯಂತ್ ಲಾಕ್ ಡೌನ್ ಮಾಡಲಾಗಿದೆ. ಆದರೆ, ಬೆಂಗಳೂರು ಕರಗವನ್ನು ಸಂಪ್ರದಾಯಕವಾಗಿ ಮುರಿಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಾಂಕೇತಿಕವಾಗಿ ಕರಗ ಆಚರಣೆ ಮಾಡಲು ಅವಕಾಶ ನೀಡಿತ್ತು. ಕಾಂಗ್ರೆಸ್ ಮುಖಂಡ ಪಿ ಆರ್ ರಮೇಶ್ ಅವರು, ಸಿಎಂ ಯಡಿಯೂರಪ್ಪನವರಿಗೆ ಯಾವ ಕಾಲದಿಂದಲೂ ಬೆಂಗಳೂರು ಕರಗವನ್ನು ನಿಲ್ಲಿಸಿಲ್ಲ. ಟಿಪ್ಪು ಸುಲ್ತಾನ್ ಕಾಲದಿಂದಲೂ ಆಚರಣೆ ಮಾಡಲಾಗುತ್ತದೆ. ಹಿಂದೆ ಪ್ಲೇಗ್ ರೋಗ ಬಂದಾಗಲೂ ಕೂಡ ಆಚರಣೆ ಮಾಡಲಾಗಿತ್ತು. ಹಾಗಾಗಿ ಕರಗಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದರು.