ನಂಬಿದ ಭಕ್ತರಿಗೆ ಒಂದಿಲ್ಲೊಂದು ವಿಸ್ಮಯದ ಮೂಲಕ ದೇವರು ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಾನೆ ಅನ್ನೋ ಮಾತಿದೆ. ಬೆಂಗಳೂರಿನ ದೇವಾಲಯವೊಂದರಲ್ಲಿ ಇಂತಹುದೇ ವಿಸ್ಮಯವೊಂದು ನಡೆದಿದೆ.

ಬೆಂಗಳೂರಿನ ಹೊರವಲಯದ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಇಂತಹದೊಂದು ವಿಸ್ಮಯ ನಡೆದಿದೆ.

ಅಭಿಷೇಕ ಮಾಡುವಾಗ ದೇವರ ವಿಗ್ರಹದ ಮೇಲಿದ್ದ ಆಭರಣದ ಸ್ಥಾನ ಬದಲಾವಣೆಯಾಗಿದೆ.

ಅಂದಾಜು 400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಅರ್ಚಕರು ಅರ್ಚನೆ ಮಾಡಿ ಅಭಿಷೇಕ ಮಾಡುವಾಗ ಹಾರದ ಸ್ಥಾನ ಬದಲಾವಣೆಯಾಗಿದೆ ಎನ್ನಲಾಗಿದ್ದು, ಈ ವಿಸ್ಮಯ ನೋಡಲು ಜನಸಾಗರವೇ ಹರಿದು ಬರುತ್ತಿದೆ.