ಬೆಂಗಳೂರು : ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬಯಲಾಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ. ಸಾರ್ವಜನಿಕ ಸಾರಿಗೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದು ತಪಾಸಣೆ ನಡೆಸುತ್ತಿದೆ.

ಡ್ರಗ್ಸ್ ಮಾಫಿಯಾ ಬಗ್ಗೆ ಪ್ರತಿದಿನವೂ ಒಂದಿಲ್ಲೊoದು ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಈ ಬೆನ್ನಲ್ಲೇ ಸಿಎಆರ್ ದಕ್ಷಿಣ ವಿಭಾಗದ ಅಧಿಕಾರಿಗಳು ರಾಜ್ಯ ಮತ್ತು ಅಂತರಾಜ್ಯ ಸಾರ್ವಜನಿಕ ಸಾರಿಗೆಯ ಬಸ್ಸುಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಆಂಧ್ರ ಬಸ್‌ಗಳ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊರ ರಾಜ್ಯದಿಂದ ಬರುವ ಬಸ್ಸುಗಳನ್ನ ಶ್ವಾನದಳ ಪರಿಶೀಲನೆ ನಡೆಸುತ್ತಿದೆ.

ಸಾರ್ವಜನಿಕ ಸಾರಿಗೆಯನ್ನ ಬಳಸಿ ಡ್ರಗ್ಸ್ ಸಪ್ಲೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನ ಆಧರಿಸಿ ಅಂತರಾಜ್ಯದಿoದ ಬರುವ ಬಸ್ಸುಗಳನ್ನ ಶ್ವಾನದಳದಿಂದ ಪರಿಶೀಲನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.