ಬೆಂಗಳೂರು : ಇತ್ತೀಚಿಗೆ ಅರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಹೀಗಾಗಿ ಜಿಮ್ (Gym) ನತ್ತ ಮುಖಮಾಡಿ ಸಖತ್ ವರ್ಕೌಟ್ ಮಾಡ್ತಿದ್ದಾರೆ. ಆದರೆ ಹೀಗೆ ವರ್ಕೌಟ್ ಮಾಡೋ ಮುನ್ನ ತಮ್ಮ ಆರೋಗ್ಯ ವರ್ಕೌಟ್ ಗೆ ಸಪೋರ್ಟ್ ಮಾಡುತ್ತಾ ಇಲ್ವಾ ಅನ್ನೋದನ್ನು ಗಮನಿಸುತ್ತಿಲ್ಲ. ಹೀಗಾಗಿ ಇತ್ತೀಚಿಗೆ ಜಿಮ್ ಗಳಲ್ಲೇ ಸಾವುಗಳು ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಜಿಮ್ ಗೆ ಸೇರೋರಿಗೆ ಆಸ್ಪತ್ರೆಗಳು ಮಹತ್ವದ ಸೂಚನೆ ನೀಡ್ತಿದೆ.

ಹೌದು ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯಿಂದ ಜಿಮ್‌ಗಳಿಗೆ ಸೇರೋರಿಗೆ ಒಂದು ಸೂಚನೆ ಕೊಡ್ತಿದೆ. ಅದೇನಂದ್ರೆ ಜಿಮ್‌ಗೆ ಸೇರೋ ಮೊದಲು ಯಾರೇ ಇದ್ದರೂ ಒಂದು ಹಾರ್ಟ್ ಟೆಸ್ಟ್ ಮಾಡಿಸಿಕೊಳ್ಳಿ ಅಂತ. ಯಾಕೆಂದ್ರೆ ಬೇಸಿಕ್ ವರ್ಕೌಟ್ ಮಾಡೋವ್ರ ಜೊತೆಗೆ ಹೈಇಂಟನ್‌ಸಿಟಿ ಎಕ್ಸಸೈಜ್ ಮಾಡೋರಿಗೆ ಹೆಚ್ಚು ಸಮಸ್ಯೆಯಾಗುತ್ತೆ,ಇಸಿಜಿ, ಇಕೋ ಟೆಸ್ಟ್, ಬ್ಲಡ್ ಪ್ರೆಶರ್ ಟೆಸ್ಟ್ ಅವಶ್ಯಕತೆ ಇದ್ದರೆ ಟ್ರೆಡ್‌ಮಿಲ್ ಇಸಿಜಿ ಮಾಡಿಸಲು ಸೂಚಿಸಲಾಗಿದೆ. ಇದ್ರಿಂದ ಹೃದಯ ಒಳಗೆ ಏನೇ ಸಮಸ್ಯೆ ಇದ್ರೂ ಮೊದಲೇ ತಿಳಿದು ಬರುತ್ತೆ.

ಹೃದಯ ಎಷ್ಟು ಕಾರ್ಯ ನಿರ್ವಹಿಸಲು ಸಾಮರ್ಥ್ಯ ಹೊಂದಿದೆ, ದೇಹದ ಸ್ಥಿತಿ, ವಯಸ್ಸಿಗೆ ತಕ್ಕಂತೆ ಜಿಮ್ ಮಾಡಬೇಕು. ಹೆಚ್ಚು ವರ್ಕೌಟ್ ಮಾಡೋದ್ರಿಂದ ಹೃದಯದ ರಕ್ತನಾಳಗಳ ಮೇಲೆ ಒತ್ತಡ ಬರುತ್ತೆ, ಅನ್ನೋದನ್ನ ಅರಿಯಬಹುದು ಮಾಹಿತಿ ನೀಡಿರೋ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೃದಯದಲ್ಲಿ ಎಲೆಕ್ಟ್ರಿಕಲ್ ಆಕ್ಟೀವಿಟಿಯಿಂದಲೂ ಸಡನ್ ಡೆತ್ ಆಗೋ ಸಾಧ್ಯತೆ ಇದೆ. ಅಲ್ಲದೇ ಜನರು ಪರೀಕ್ಷೆ ಮಾಡಿಸದೇ ನೇರವಾಗಿ ಜಿಮ್ ಸೇರೋದರಿಂದ ಅಪಾಯಕ್ಕೆ ಆಹ್ವಾನ ನೀಡ್ತಿದ್ದಾರೆ ಅಂತ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Gym ಸೇರುವ ಮುನ್ನ ಈ ಪರೀಕ್ಷೆ ಮಾಡಿಸಬೇಕಂತೆ
ಹೀಗಾಗಿ ಜಿಮ್ ಗೆ ಸೇರೋ ಮೊದಲು ಹೆರಿಡಿಟಿ ಇರೋವ್ರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೃದಯದ ಬಡಿತ ಕಡಿಮೆಯಾದ್ರೂ ಸಮಸ್ಯೆ ಇದೆ ಹೆಚ್ಚಾದರೂ ಸಮಸ್ಯೆ ಇದೆ. ಮಕ್ಕಳು ಹಾಗೂ ಯುವಕರು ಕೂಡಾ ಪರೀಕ್ಷೆ ಮಾಡಿಸಬೇಕು ಇದ್ರ ಜೊತೆಗೆ ಕಣ್ಣು ಕತ್ತಲೆಯಾಗ್ತಿದ್ರೆ, ತಲೆ ಸುತ್ತು ಬರೋದು, ಎದೆ ಬಡಿತ ಹೆಚ್ಚಾದಂಥವರು ಕಡ್ಡಾಯವಾಗಿ ಟೆಸ್ಟ್ ಮಾಡಿಸಲೇಬೇಕು ಎಂದಿದ್ದಾರೆ.

ಹೀಗೆ ಟೆಸ್ಟ್ ಮಾಡಿಸೋದರಿಂದ ಯಾರು ಜಿಮ್ ಗಳಲ್ಲಿ ಬೆವರು ಇಳಿಸಬಹುದು. ಯಾರು ಸಣ್ಣ ಪುಟ್ಟ ವ್ಯಾಯಾಮ ಮಾಡಬಹುದು ಅನ್ನೋದು ಗೊತ್ತಾಗುತ್ತದೆ. ಇದರಿಂದ ಯುವಜನರು ಅನಗತ್ಯವಾಗಿ ಜಿಮ್ ನಲ್ಲಿ ಬೆವರಿಳಿಸಲು ಹೋಗಿ ಅಪಾಯಕ್ಕೆ ಸಿಲುಕೋದನ್ನು ತಪ್ಪಿಸಬಹುದು.
ಇದನ್ನೂ ಓದಿ : ವಯಸ್ಸಾದಂತೆ ಚರ್ಮದ ಕಾಂತಿ ಕಡಿಮೆಯಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆಯೇ?
ಇದನ್ನೂ ಓದಿ : ಬೇಸಗೆಯಲ್ಲಿ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಿ; ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ
(Be alert before joining the Gym , Do you Know Doctors What Says about Workout)