Health Tips : ಬೀಟ್ರೂಟ್ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯವಾದ ತರಕಾರಿಯಾಗಿದೆ. ಬೀಟ್ರೂಟ್ ಸೇವನೆಯಿಂದ ನಮ್ಮ ದೇಹಕ್ಕೆ ಅಗಾಧ ಪ್ರಮಾಣದ ಲಾಭವಿದೆ. ಬೀಟ್ರೂಟ್ ಜ್ಯೂಸ್ನಿಂದ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗೋದ್ರಿಂದ ಇದನ್ನು ಸೂಪರ್ ಜ್ಯೂಸ್ (Beetroot juice) ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಉಳ್ಳವರು, ಸ್ಥೂಲಕಾಯದಿಂದ ಬಳಲುತ್ತಿರುವವರು ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಈ ಬೀಟ್ ರೂಟ್ ಜ್ಯೂಸ್ ಸೇವಿಸಿದ್ರೆ ತುಂಬಾನೇ ಒಳ್ಳೆಯದು.
ಬೀಟ್ರೂಟ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೋಟ್ಯಾಷಿಯಂ, ಕ್ಯಾಲ್ಶಿಯಂ, ಆಯೋಡಿನ್, ಮೆಗ್ನಿಷಿಯಂ, ಪಾಸ್ಪರಸ್, ಸಲ್ಫರ್, ಕೊಬ್ಬು ಹಾಗೂ ವಿಟಮಿನ್ ಬಿ1, ಬಿ2, ಬಿ6 ನಂತಹ ಅಂಶಗಳು ಇವೆ. ಇವೆಲ್ಲವೂ ದೇಹದ ಆರೋಗ್ಯಕ್ಕೆ ಸೂಕ್ತ ಎಂದು ಪರಿಗಣಿಸಲಾಗಿದೆ.
ಸಂಶೋಧನೆಯ ಪ್ರಕಾರ ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದರಿಂದ ಸ್ನಾಯುಗಳು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳತ್ತದೆ. ಜೊತೆಯಲ್ಲಿ ಉರಿಯೂತವನ್ನೂ ಕಡಿಮೆ ಮಾಡುತ್ತದೆ. ಬೀಟ್ರೂಟ್ನಲ್ಲಿರುವ ಫೈಬರ್ ಅಂಶವು ಹೊಟ್ಟೆಯನ್ನು ಶುಚಿಯಾಗಿಡುತ್ತದೆ, ಅಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಬೀಟ್ರೂಟ್ ಹಾಗೂ ಕ್ಯಾರಟ್ ಜ್ಯೂಸ್ ಕುಡಿಯಬೇಕು. ಇದರಿಂದ ಬಿಪಿ ನಿಯಂತ್ರಣದಲ್ಲಿ ಇರಲಿದೆ. ಬೀಟ್ರೂಟ್ನಲ್ಲಿ ವಿಟಾಮಿನ್ ಬಿ, ವಿಟಾಮಿನ್ ಸಿ, ಕ್ಯಾಲ್ಶಿಯಂ, ಪ್ರೋಟಿನ್ ಅಗಾಧ ಪ್ರಮಾಣದಲ್ಲಿದೆ. ಇದು ರಕ್ತವನ್ನು ಶುದ್ಧೀಕರಿಸಲು ಹಾಗೂ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ನಿಯಂತ್ರಿಸಲು ಸಹಕಾರಿ.
ಬೀಟ್ರೂಟ್ ಜ್ಯೂಸ್ ಅಥವಾ ಸಲಾಡ್ನ್ನು ಸೇವನೆ ಮಾಡುದುವರಿಂದ ನಿಮಗೆ ಅನೇಕ ಪ್ರಯೋಜನಗಳು ಇವೆ. ನಿಮಗೆ ಸುಸ್ತು ಆಗೋದಿಲ್ಲ ಹಾಗೂ ದೇಹದಲ್ಲಿ ರಕ್ತದ ಹರಿವು ಉತ್ತಮವಾಗಿ ಇರಲಿದೆ. ಬೀಟ್ರೂಟ್ನಿಂದ ನಿಮ್ಮ ತ್ವಚೆಯ ಆರೋಗ್ಯ ಕೂಡ ಸುಧಾರಿಸುತ್ತದೆ. ಬೀಟ್ರೂಟ್ ಕೂದಲಿನ ಶಕ್ತಿಯನ್ನೂ ಹೆಚ್ಚಿಸುತ್ತದೆ. ಚರ್ಮದಲ್ಲಿರುವ ಡೆಡ್ ಸ್ಕಿನ್ಗಳನ್ನು ಹೋಗಲಾಡಿಸುತ್ತದೆ.
ಇದನ್ನು ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!
ಇದನ್ನೂ ಓದಿ : Menstrual Health :ನೆನಪಿಡಿ: ಮುಟ್ಟಿನ ದಿನಗಳಲ್ಲಿ ಮಹಿಳೆಯರು ಮಾಡಲೇಬಾರದು ಈ ತಪ್ಪು..!
ಇದನ್ನೂ ಓದಿ : almond with honey benefits : ಬಾದಾಮಿ ಹಾಗೂ ಜೇನುತುಪ್ಪ ಸೇವನೆ ಹಿಂದಿದೆ ಆರೋಗ್ಯದ ಗುಟ್ಟು
Health Tips : benefits of Beetroot juice