BIG BREAKING : ನನ್ನಮ್ಮ ಸೂಪರ್​ಸ್ಟಾರ್​​ ಖ್ಯಾತಿಯ ಮಗು ಸಮನ್ವಿ ರಸ್ತೆ ಅಪಘಾತದಲ್ಲಿ ಸಾವು

BIG BREAKING : ಬೆಂಗಳೂರು : ಕನ್ನಡ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ಹೆಸರಾಂತ ರಿಯಾಲಿಟಿ ಶೋ ನನ್ನಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಮಗು ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದೆ. ತಾಯಿ ಅಮೃತಾ ನಾಯ್ಡು ಜೊತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಎನ್ನಲಾಗಿದೆ. ಅಪಘಾತದಲ್ಲಿ ನಟಿ ಅಮೃತಾ ನಾಯ್ಡುಗೆ ಗಂಭೀರ ಗಾಯವಾಗಿದೆ.

ಕೋಣನಕುಂಟೆ ರಸ್ತೆಯಿಂದ ವಾಜರಳ್ಳಿ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಆರು ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದರೆ ತಾಯಿ ಹಾಗೂ ನಟಿ ಅಮೃತಾ ನಾಯ್ಡು ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕುಮಾರಸ್ವಾಮಿ ಲೇ ಔಟ್​ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತಕ್ಕೆ ಕಾರಣವಾದ ಟಿಪ್ಪರ್​ ಲಾರಿಯನ್ನು ಕುಮಾರಸ್ವಾಮಿ ಲೇಔಟ್​ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿ ಸಮನ್ವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಕಿಮ್ಸ್​ಗೆ ರವಾನಿಸಲಾಗಿದೆ. ನಟಿ ಅಮೃತಾ ನಾಯ್ಡುರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಕುಮಾರಸ್ವಾಮಿ ಲೇ ಔಟ್​ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Career Vastu Tips: ವೃತ್ತಿ ಜೀವನದಲ್ಲಿ ಯಶಸ್ಸು ಬೇಕೆಂದರೆ ಅನುಸರಿಸಿ ಈ ಸರಳ ಸೂತ್ರ

ಇದನ್ನೂ ಓದಿ : Sulli Deals App Creator : ದೆಹಲಿ ಪೊಲೀಸರಿಂದ ಸುಲ್ಲಿ ಡೀಲ್ಸ್ ಆ್ಯಪ್ ಕ್ರಿಯೇಟರ್‌ ಬಂಧನ

BIG BREAKING : nannamma superstar reality show fame child samanvi died in road accident

Comments are closed.