ಬೆಂಗಳೂರು : ಸಚಿವ ಸ್ಥಾನದಿಂದ ವಂಚಿತರಾಗಿರೊ ಬಿಜೆಪಿಯ ಕೆಲ ಹಿರಿಯ ಶಾಸಕರು ನಿನ್ನೆ ರಾತ್ರಿ ಕೂಡಲಸಂಗಮದ ಪಂಚಸಾಲಿ ಮಠಾಶೀಶರಾಗಿರುವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ರಹಸ್ಯಸಭೆ ನಡೆಸಿದ್ದಾರೆ. ಬಿಜೆಪಿಯ ಶಾಸಕರ ಅಸಮಾಧಾನ ಇದೀಗ ಸಿಎಂ ಯಡಿಯೂರಪ್ಪಗೆ ತಲೆನೋವು ತರಿಸಿದೆ.
ಸಿಎಂ ಪತ್ರ ಬಿ.ವೈ.ವಿಜಯೇಂದ್ರ ಶಾಸಕರ ಕೆಲಸ ಕಾರ್ಯಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ, ಮೂಲ ಬಿಜೆಪಿ ಶಾಸಕರನ್ನು ಯಡಿಯೂರಪ್ಪ ಕಡೆಗಣಿಸುತ್ತಿದ್ದಾರೆ ಅಂತಾ ಅಸಮಾಧಾನ ವ್ಯಕ್ತಪಡಿಸಿರೊ ಬಿಜೆಪಿಯ ಅತೃಪ್ತ ಶಾಸಕರು ಜಗದೀಶ್ ಶೆಟ್ಟರ್ ನಿವಾಸದಲ್ಲಿ ಮೊನ್ನೆ ಸಭೆ ನಡೆಸಿದ್ದರು. ಸಿಎಂ ಸಭೆಯ ವಿಚಾರದ ಕುರಿತು ಸ್ಪಷ್ಟನೆಯನ್ನು ಪಡೆದುಕೊಂಡಿದ್ದರು. ಆದರೆ ಎಲ್ಲವೂ ಮುಗಿಯಿತು ಅನ್ನೋ ಹೊತ್ತಲ್ಲೇ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಮುರುಗೇಶ್ ನಿರಾಣಿ, ಮಹೇಶ್ ಕುಮಟಳ್ಳಿ, ಕರಡಿ ಸಂಗಣ್ಣ, ಮೋಹನ್ ಲಿಂಬಿಕಾಯಿ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವು ಶಾಸಕರು ಪಂಚಮಸಾಲಿ ಮಠಾಧೀಶರ ನೇತೃತ್ವದಲ್ಲಿ ನಿನ್ನೆ ರಾತ್ರಿ ರಹಸ್ಯಸಭೆ ನಡೆಸಿದ್ದಾರೆ.
ಸಭೆಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ದವೂ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಬಹುಸಂಖ್ಯಾತ ಪಂಚಮಸಾಲಿ ಸಮುದಾಯವನ್ನು ಸರಕಾರ ಕಡೆಗಣಿಸುತ್ತಿದೆ ಅಂತಾ ಶಾಸಕರು ನೋವನ್ನ ತೋಡಿಕೊಂಡಿದ್ದಾರೆ. ಈ ಹಿಂದೆ ಪಂಚಮಸಾಲಿ ಮಠಾಧೀಶರು ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆಯಲ್ಲಿ ಯಡಿಯೂರಪ್ಪ ಸ್ವಾಮೀಜಿ ವಿರುದ್ದ ಮುನಿಸಿಕೊಂಡಿದ್ದರು. ಇದೀಗ ಬಿಜೆಪಿ ಶಾಸಕರು ರಹಸ್ಯಸಭೆ ನಡೆಸಿದ್ದು, ಸಭೆಯಲ್ಲಿ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಸೇರಿದಂತೆ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಅಸಮಾಧಾನಿತ ಬಿಜೆಪಿ ಶಾಸಕರು ಸಾಲು ಸಾಲು ರಹಸ್ಯ ಸಭೆ ನಡೆಸುತ್ತಿರೋದು ಯಡಿಯೂರಪ್ಪ ಆತಂಕಕ್ಕೆ ಕಾರಣವಾಗಿದೆ.
ಮಠಾಧೀಶರ ನೇತೃತ್ವದಲ್ಲಿ ಅತೃಪ್ತರ ರಹಸ್ಯ ಸಭೆ : ಬಿಜೆಪಿಯಲ್ಲಿ ಮುಗಿಯದ ಭಿನ್ನಮತ, ಸಿಎಂಗೆ ಟೆನ್ಶನ್ !
- Advertisement -