ಸೋಮವಾರ, ಏಪ್ರಿಲ್ 28, 2025
HomeBreakingಮತ್ತೆ ಬೀದಿಗೆ ಬಂದ್ರಾ ಸಿಂಗರ್ ರಾನು ಮಂಡಲ್….! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋದ ಅಸಲಿಯತ್ತೇನು?!

ಮತ್ತೆ ಬೀದಿಗೆ ಬಂದ್ರಾ ಸಿಂಗರ್ ರಾನು ಮಂಡಲ್….! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೋಟೋದ ಅಸಲಿಯತ್ತೇನು?!

- Advertisement -

ಮುಂಬೈ: ಅದೃಷ್ಟ ಅನ್ನೋದು ಯಾವತ್ತು ಯಾರ ಮನೆ ಬಾಗಿಲಿಗೆ ಬಂದು ನಿಲ್ಲುತ್ತೆ ಗೊತ್ತಿಲ್ಲ. ಅಂತಹುದೇ ಅದೃಷ್ಟದ ಆಟದಲ್ಲಿ ಎತ್ತರಕ್ಕೆ ಏರಿ ಬಾಲಿವುಡ್ ಸಿಂಗರ್ ಎಂದು ಗುರುತಿಸಿಕೊಂಡವಳು ರೇಲ್ವೈ ಸ್ಟೇಶನ್ ಗಾಯಕಿ ರಾನು ಮಂಡಲ್. ಆದರೆ, ಮತ್ತೆ ಆಕೆ ಬೀದಿಗೆ ಬಿದ್ರಾ ಅನ್ನೋ ಅನುಮಾನಕ್ಕೆ ಕಾರಣವಾಗಿದ್ದು ಆಕೆಯ ಲೆಟೇಸ್ಟ್ ಪೋಟೋಗಳು…

ರಾನು ಮಂಡಲ್ ಬಂಗಾಳದ ರೇಲ್ವೈ ಸ್ಟೇಶನ್ ನಲ್ಲಿ ಹಾಡು ಹೇಳಿ ಬದುಕುತ್ತಿದ್ದ ಭಿಕ್ಷುಕಿ. ಆಕೆ ರೇಲ್ವೈ ಸ್ಟೇಶನ್ ನಲ್ಲಿ ಹಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಆಕೆಯ ಅದೃಷ್ಟ ಖುಲಾಯಿಸಿತ್ತು. ಆಕೆ ಹೀಮೆಶ್ ರೇಶಮಿಯಾ ಕಂಪೋಶನ್ ಎರಡು ಹಾಡುಗಳಿಗೆ ಧ್ವನಿಯಾಗುವ ಮೂಲಕ ರಾತ್ರೋರಾತ್ರಿ ಬಾಲಿವುಡ್ ಸಿಂಗರ್ ಎನ್ನಿಸಿಕೊಂಡಿದ್ದರು.

ಅಷ್ಟೇ ಅಲ್ಲ ಆಕೆ ವಾಸವಾಗಿದ್ದ ಸ್ಲಂನಿಂದ ಬೇರೆ ಐಷಾರಾಮಿ ಫ್ಲ್ಯಾಟ್ ಗೂ ಶಿಫ್ಟ್ ಆಗಿದ್ದಳು. ಆದರೆ ರಾತ್ರೋರಾತ್ರಿ ಸಿಕ್ಕ ಯಶಸ್ಸು ಆಕೆಯನ್ನು ಒರಟಾಗಿ ವರ್ತಿಸುವಂತೆ ಮಾಡಿತ್ತು. ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ ಅಭಿಮಾನಿಗಳ ಜೊತೆ ಒರಟಾಗಿ ವರ್ತಿಸುವ ಮೂಲಕ ರಾನು ಮಂಡಲ್ ಜನರ ತೀವ್ರ ಟೀಕೆಗೆ ಗುರಿಯಾಗಿದ್ದಳು. ‘

ಆದರೆ ಕೆಲದಿನಗಳಿಂದ ರಾನು ಮಂಡಲ್  ಹಳೆ ಬಟ್ಟೆ ಧರಿಸಿದ ಸ್ಥಿತಿಯಲ್ಲಿ ಮತ್ತೆ ಬೇಕರಿಯೊಂದರಲ್ಲಿ ಭೀಕ್ಷೆ ಬೇಡುತ್ತಿರುವ ಪೋಟೋಗಳು ವೈರಲ್ ಆಗಿದ್ದು, ರಾನು ಮಂಡಲ್ ಮತ್ತೆ ಬದುಕಿಗಾಗಿ ಭೀಕ್ಷೆ ಬೇಡುತ್ತಿದ್ದಾರೆ. ಆಕೆಯ ಅಹಂಕಾರವೇ ಆಕೆಯನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಕಮೆಂಟ್ ಮಾಡುತ್ತಿದ್ದಾರೆ.

ಆದರೆ ಈ ಪೋಟೋ ರಾನು ಮಂಡಲ್ ಪ್ರಸಿದ್ಧಿ ಬರೋದಕ್ಕಿಂತ ಮೊದಲಿನ ಪೋಟೋಗಳೋ, ಅಥವಾ ನಿಜವಾಗಿಯೂ ಆಕೆ ಈಗ ಮತ್ತೆ ಬೀದಿಗೆ ಬಿದ್ದಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ರಾನು ಮಂಡಲ್ ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದ ಬಳಿಕ ಆಕೆಯ ಮಗಳು ರಾನುಮಂಡಲ್ ರನ್ನು ಕರೆದೊಯ್ದಿದ್ದಳು.

ಆದರೆ ಮೂಲಗಳ ಪ್ರಕಾರ ರಾನು ಮಂಡಲ್ ಕೊರೋನಾ ಲಾಕ್ ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿರೋದು ನಿಜ. ಬಾಲಿವುಡ್ ನ ಮೂರು ಚಿತ್ರಗಳಿಗೆ ರಾನು ಮಂಡಲ್ ಹಿನ್ನೆಲೆ ಧ್ವನಿ ನೀಡಿದ್ರೂ ಹೇಳಿಕೊಳ್ಳುವಂತ ಅವಕಾಶಗಳು ರಾನು ಮಂಡಲ್ ಪಾಲಿಗೆ ಸಿಕ್ಕಿಲ್ಲ. ಹೀಗಾಗಿ ರಾನು ಮಂಡಲ್ ಮತ್ತೆ ಜೀವನ ನಿರ್ವಹಣೆಗಾಗಿ ಪರದಾಡುವ ಸ್ಥಿತಿಯಲ್ಲಿದ್ದಾರಂತೆ.

ಹೀಗಾಗಿ ರಾನು ಮಂಡಲ್ ತಮ್ಮ ಐಷಾರಾಮಿ ಫ್ಯ್ಲಾಟ್ ತೊರೆದು ಮತ್ತೆ ಮೂಲವಾಸವಾಗಿದ್ದ ಸ್ಲಂಗೆ ಬಂದಿದ್ದಾರೆ ಎನ್ನುತ್ತಿದ್ದಾರೆ. ಆದರೆ ಎಲ್ಲವೂ ಊಹಾಪೋಹ ಸುದ್ದಿಯೇ ವಿನಃ ರಾನು ಮಂಡಲ್ ಈ ಪೋಟೋಗಳ ಅಸಲಿಯತ್ತು ಮಾತ್ರ ಬೆಳಕಿಗೆ ಬಂದಿಲ್ಲ.

RELATED ARTICLES

Most Popular