ಸೋಮವಾರ, ಏಪ್ರಿಲ್ 28, 2025
HomeBreakingಅಭಿಮಾನಿಗಳಿಗೆ ಬಿಗ್ ಶಾಕ್….! ಹಾಟ್ ಬೆಡಗಿ ಪೂನಂಪಾಂಡೆ ಬಂಧನ…!!

ಅಭಿಮಾನಿಗಳಿಗೆ ಬಿಗ್ ಶಾಕ್….! ಹಾಟ್ ಬೆಡಗಿ ಪೂನಂಪಾಂಡೆ ಬಂಧನ…!!

- Advertisement -

ಗೋವಾ: ಸದಾ ವಿವಾದಗಳಿಂದಲೇ ಸುದ್ದಿಯಾಗೋ ಪಡ್ಡೆಹೈಕಳ ಹಾಟ್ ಫೆವರಿಟ್ ಪೂನಂಪಾಂಡೆಯನ್ನು ಪೊಲೀಸರು ಬಂಧಿಸಿದ್ದು ಅಭಿಮಾನಿಗಳಿಗೆ ಶಾಕ್ ಆಗಿದೆ. ಗೋವಾದ ಡ್ಯಾಂವೊಂದರಲ್ಲಿ ಅಶ್ಲೀಲ ಚಿತ್ರ ಚಿತ್ರೀಕರಿಸಿದ ಆರೋಪದ ಮೇಲೆ ಪೂನಂಪಾಂಡೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿಗಷ್ಟೇ ಹೊಸಬದುಕಿಗೆ ಕಾಲಿಟ್ಟ ಬಾಲಿವುಡ್ ನಟಿ ಪೂನಂಪಾಂಡೆ ಪತಿ ಸ್ಯಾಮ್ ಅಹ್ಮದ್ ಜೊತೆ ಗೋವಾದಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ.

ಇಂತಿಪ್ಪ ಪೂನಂಪಾಂಡೆ, ಗೋವಾದ ಕ್ಯಾನಕೋಲಿಯ ಚಪೋಲಿ ಡ್ಯಾಂನಲ್ಲಿ ವಿಡಿಯೋವೊಂದನ್ನು ಚಿತ್ರೀಕರಿಸಿದ್ದರು. ಅಷ್ಟೇ ಅಲ್ಲ ಆ ವಿಡಿಯೋವನ್ನು ತಮ್ಮ ಇನ್ ಸ್ಟಾಂಗ್ರಾಂನಲ್ಲಿ ಹಂಚಿಕೊಂಡಿದ್ದರು.

ಪೂನಂಪಾಂಡೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು, ಸರ್ಕಾರಿ ಸ್ವಾಮ್ಯದ ಸ್ಥಳದಲ್ಲಿ ಈ ರೀತಿ ಅಶ್ಲೀಲ ಚಿತ್ರ ಚಿತ್ರೀಕರಿಸಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಸ್ವಾಮ್ಯದ ಸ್ಥಳದಲ್ಲಿ ಅಶ್ಲೀಲ ಚಿತ್ರ ತಯಾರಿಸಿದ ಆರೋಪದ ಮೇಲೆ ಗೋವಾ ರಾಜ್ಯ ಸಂಪನ್ಮೂಲ ಇಲಾಖೆ ನಟಿಯ ವಿರುದ್ಧ ಕೇಸ್ ದಾಖಲಿಸಿತ್ತು. ಇದರ ಜೊತೆಗೆ ಗೋವಾದ ಫಾವರ್ಡ್ ಪಾರ್ಟಿಯ ಮಹಿಳಾ ಘಟಕ ಕೂಡ ಪೂನಂ ಪಾಂಡೆಯ ಈ ಅಶ್ಲೀಲದ ವಿರುದ್ಧ ಕ್ಯಾನಕೋನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು.

ಎರಡು ದೂರಿನ ಹಿನ್ನೆಲೆಯಲ್ಲಿ ಹಾಗೂ ಅನುಮತಿ ಪಡೆಯದೇ ಸರ್ಕಾರಿ ಸ್ವಾಮ್ಯದ ಸ್ಥಳದಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ನಟಿ ಪೂನಂ ಪಾಂಡೆಯನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ.

RELATED ARTICLES

Most Popular