ಮುಂಬೈ: ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು ಆಡಳಿತದಲ್ಲಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ವಿರುದ್ಧ ಮಾತನಾಡಿ ಈಗ ಮೌನವಹಿಸಿರುವ ಬಾಲಿವುಡ್ ನಟರ ಸಿನಿಮಾ ರಿಲೀಸ್ ಗೆ ಅವಕಾಶ ನೀಡೋದಿಲ್ಲ ಎಂದು ಕಾಂಗ್ರೆಸ್ ಬೆದರಿಕೆ ಒಡ್ಡಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಈ ರೀತಿ ಸರ್ವಾಧಿಕಾರಿ ಧೋರಣೆ ತೋರಲು ಮುಂದಾಗಿದ್ದು, ಬೆಲೆ ಏರಿಕೆ ವಿರುದ್ಧ ಮೌನವಹಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಇತರ ಬಾಲಿವುಡ್ ನಟರ ಸಿನಿಮಾಗಳ ಬಿಡುಗಡೆ ಹಾಗೂ ಶೂಟಿಂಗ್ ಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲ್ ಈ ಕುರಿತು ಹೇಳಿಕೆ ನೀಡಿದ್ದು, ಇಂಧನ ದರ ಏರಿಕೆ,ಅಡುಗೆ ಅನಿಲದ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕಿಡಾಗಿದೆ.

ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್ ಬೆಲೆ ಏರಿಕೆ ವಿರುದ್ಧ ಟ್ವೀಟ್ ಮಾಡುತ್ತಿದ್ದರು. ಆದರೆ ಈಗ ಮೌನ ವಹಿಸಿದ್ದಾರೆ. ಯಾಕೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರ ಸರ್ಕಾರದ ಪಾಲಿಸಿ ಹಾಗೂ ಬೆಲೆ ಏರಿಕೆ ವಿರುದ್ಧ ಮಾತನಾಡದೆ ಇದ್ದರೇ ಮಹಾರಾಷ್ಟ್ರ ದಲ್ಲಿ ಅಕ್ಷಯ್ ಕುಮಾರ್ ಹಾಗೂ ಬಿಗ್ ಬಿ ಸಿನಿಮಾಗಳಿಗೆ ಪ್ರದರ್ಶನ ಅವಕಾಶ ಹಾಗೂ ಶೂಟಿಂಗ್ ಗೂ ಅವಕಾಶ ನೀಡೋದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದು ಕಾಂಗ್ರೆಸ್ ಸರ್ವಾಧಿಕಾರಿಧೋರಣೆ ಗೆ ಸಾಕ್ಷಿ ಒದಗಿಸಿದೆ.

ಇನ್ನು ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮೇಲ್ನೋಟಕ್ಕೆ ಪ್ರಜಾಪ್ರಭುತ್ವದಲ್ಲಿ ಇದ್ದರೂ ಅದರ ಆಳದಲ್ಲಿ ಇನ್ನೂ ಸರ್ವಾಧಿಕಾರಿಧೋರಣೆ ಇದೆ. ಅದಕ್ಕೆ ಈ ಹೇಳಿಕೆಗಳೇ ಸಾಕ್ಷಿ.

ದೇಶದ ಪರವಾಗಿ ಟ್ವೀಟ್ ಮಾಡುವುದು ಕ್ರೈಂ ಅಲ್ಲ. ಬೇರೆಲ್ಲೋ ಕೂತು ದೇಶ ಒಡೆಯುವ ಮಾತನಾಡುವವರನ್ನು ಬೆಂಬಲಿಸುವುದು ಅಪರಾಧ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಲಿ ಎಂದಿದ್ದಾರೆ.
ಒಟ್ನಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಬಹಿರಂಗ ಹೇಳಿಕೆ ಚರ್ಚೆಗೆ ಗುರಿಯಾಗಿದ್ದು, ಬಾಲಿವುಡ್ ನಟರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..