ಮುಂಬೈ: ಬಾಲಿವುಡ್ ನಲ್ಲಿ ಎನ್ ಸಿಬಿ ಬೇಟೆ ಮುಂದುವರೆದಿದ್ದು, ಮತ್ತೊಮ್ಮೆ ದೀಪಿಕಾ ಪಡುಕೋಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಮತ್ತೊಮ್ಮೆ ಎನ್ಸಿಬಿ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲೇಬೇಕಾದ ಸ್ಥಿತಿ ಎದುರಾಗಿದೆ.

ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಗೆ ನಾಕೋರ್ಟಿಕ್ಸ್ ಕಂಟ್ರೋಲ್ ಬ್ಯುರೋ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಆದರೆ ಸಮನ್ಸ್ ನೀಡುತ್ತಿದ್ದಂತೆ ಕರೀಷ್ಮಾ ಪ್ರಕಾಶ್ ನಾಪತ್ತೆಯಾಗಿದ್ದಾರೆ ಎಂಬ ವದಂತಿಯೂ ಹರಡಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ವೇಳೆ ಬಾಲಿವುಡ್ ಗೆ ಡ್ರಗ್ಸ್ ಲಿಂಕ್ ಇರೋದು ಬಯಲಿಗೆ ಬಂದಿತ್ತು. ಆ ಬಳಿಕ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿಯರಿಗೆ ನೊಟೀಸ್ ಜಾರಿ ಮಾಡಿದ ಎನ್ ಸಿಬಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಇದೀಗ ಮತ್ತೆ ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಸಮನ್ಸ ನೀಡಿರೋದು ದೀಪಿಕಾ ಪಡುಕೋಣೆ ಸಂಕಷ್ಟ ತಂದಿತ್ತಿದ್ದು, ಹಾಗಿದ್ದರೇ ದೀಪಿಕಾ ಪಡುಕೋಣೆ ಡ್ರಗ್ಸ್ ಜಾಲದಲ್ಲಿ ಇನ್ನಷ್ಟು ವಿಚಾರಣೆಗೆ ಒಳಗಾಗಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿಸಿದೆ.

ಅಷ್ಟೇ ಅಲ್ಲ ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಜಾರಿಯಾದ ಎನ್ ಸಿಬಿ ಸಮನ್ಸ್ ಹಲವು ಬಾಲಿವುಡ್ ನಟ-ನಟಿಯರ ಎದೆಯಲ್ಲಿ ನಡುಕ ಮೂಡಿಸಿದ್ದು, ಇನ್ನೇಷ್ಟು ಜನರು ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.