ಬಾಲಿವುಡ್ ನಲ್ಲಿ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳ ಮೂಲಕ ಸಂಭಾವನೆ ಹಾಗೂ ಬೇಡಿಕೆ ಹೆಚ್ಚಿಸಿಕೊಂಡು ಕನ್ನಡತಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರಗಳ ಬಳಿಕ ಇದೀಗ ಮತ್ತೊಮ್ಮೆ ಖಳನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಬಾಲಿವುಡ್ ನಲ್ಲಿ ಮತ್ತೊಮ್ಮೆ ಧೂಮ್ ಹಾವ ಸೃಷ್ಟಿಸಲು ಸಿದ್ಧವಾಗಿದ್ದು, ಇದರಲ್ಲಿ ಡಿಪ್ಸ್ ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ಸಿನಿ ಅಂಗಳದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಧೂಮ್ ಚಿತ್ರದ ನಾಲ್ಕನೇ ಸಿಕ್ವೆನ್ಸ್ ತೆರೆಗೆ ತರಲು ನಿರ್ಮಾಪಕರು ಮುಂದಾಗಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಚಾಲೆಂಜಿಂಗ್ ವಿಲನ್ ರೋಲ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಧೂಮ್ ನ ಇದುವರೆಗಿನ ಮೂರು ಚಿತ್ರಗಳು ವಿಭಿನ್ನತೆ, ಕತೆ ಹೆಣೆದ ರೀತಿ, ಚೇಸಿಂಗ್ ಸೇರಿದಂತೆ ಹಲವು ಕಾರಣಕ್ಕೆ ಸಖತ್ ಹಿಟ್ ಆಗಿತ್ತು. ಮೊದಲ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಉದಯ ಚೋಪ್ರಾ,ಜಾನ್ ಅಬ್ರಹಾಂ ನಟಿಸಿದ್ದರೇ, ಎರಡನೇ ಸಿಕ್ವೆನ್ಸ್ ನಲ್ಲಿ ಹೃತಿಕ್ ರೋಶನ್ ಹಾಗೂ ಮೂರನೇ ಚಿತ್ರದಲ್ಲಿ ಅಮಿರ್ ಖಾನ್ ನಟಿಸಿದ್ದರು.

ಈಗ ಧೂಮ್-4 ನೇ ಚಿತ್ರದಲ್ಲಿ ಶಾರೂಕ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದ್ದು, ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ, ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ ತೆಲುಗಿನಲ್ಲಿ ಪ್ರಭಾಸ್ ಗೂ ಜೋಡಿಯಾಗುತ್ತಿದ್ದಾರೆ. ಇದಲ್ಲದೇ ಹೃತಿಕ್ ರೋಶನ್ ಜೊತೆ ಮೊದಲ ಬಾರಿಗೆ ಸಿದ್ಧಾರ್ಥ್ ಆನಂದ ನಿರ್ದೇಶನದಲ್ಲಿ ಫೈಟರ್ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಸಾಮಾನ್ಯವಾಗಿ ಒಮ್ಮೆ ಹಿರೋಯಿನ್ ಪಟ್ಟಕ್ಕೇರಿದ್ದ ನಟಿಯರು ಖಳನಾಯಕಿ ಪಾತ್ರದಲ್ಲಿ ನಟಿಸಲು ಮನಸ್ಸು ಮಾಡೋದಿಲ್ಲ.

ಆದರೆ ಸದಾ ವಿಭಿನ್ನ ಪಾತ್ರ ಹಾಗೂ ಪ್ರಯೋಗಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳೋ ನಟಿ ದೀಪಿಕಾ ಪಡುಕೋಣೆ ವಿಲನ್ ರೋಲ್ ಗೆ ಯೆಸ್ ಎಂದಿದ್ದು ಬಾಲಿವುಡ್ ಗೆ ಮತ್ತೊಂದು ಬಿಗ್ ಮೂವಿ ಸಿದ್ಧವಾಗುತ್ತಿದೆ.