ಸದಾ ಬೇರೆಯವರ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿ,ಟ್ವೀಟ್ ಮಾಡಿ ಸುದ್ದಿಯಾಗೋ ಕಂಗನಾ ಈ ಭಾರಿ ತಮ್ಮ ಬಾಲ್ಯದ ಬಗ್ಗೆ ಶಾಕಿಂಗ್ ಸಂಗತಿ ರಿವೀಲ್ ಮಾಡಿ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಹೆತ್ತ ತಂದೆಗೆ ಹೊಡೆಯೋಕೆ ಹೋಗಿದ್ದೆ ಅನ್ನೋ ಕಂಗನಾ ಮಾತು ಕೇಳಿ ಬಾಲಿವುಡ್ ಬೆಚ್ಚಿ ಬಿದ್ದಿದೆ.

ತಂದೆ ಮೇಲೆ ಕೈ ಮಾಡಲು ಮುಂದಾಗಿದ್ದೆ ಅನ್ನೋ ಸಂಗತಿಯನ್ನು ನಿರ್ಭಿತಿಯಿಂದ ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿರುವ ಕಂಗನಾ ಮಾತು ಅದೇಷ್ಟೋ ಜನರಿಗೆ ಶಾಕ್ ಉಂಟುಮಾಡಿದೆ. ಬಾಲ್ಯದ ದಿನಗಳಿಂದಲೂ ರೆಬೆಲ್ ವ್ಯಕ್ತಿತ್ವ ಹೊಂದಿದ್ದೆ ಎಂಬುದನ್ನು ರಿವೀಲ್ ಮಾಡಿರುವ ಕಂಗನಾ, ನನ್ನನ್ನು ಡಾಕ್ಟರ್ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಆದರೆ ನನಗೆ ಮನಸ್ಸಿರಲಿಲ್ಲ.
ನನ್ನನ್ನು ಡಾಕ್ಟರ್ ಮಾಡಬೇಕು ಎಂಬ ಕನಸಿನಲ್ಲಿ ಒಳ್ಳೆಯ ಶಾಲೆಗೆ ಸೇರಿಸಲು ಮುಂದಾಗಿದ್ದರು. ಆದರೆ ಆ ಶಾಲೆಗೆ ಹೋಗಲು ನನಗೆ ಮನಸ್ಸಿರಲಿಲ್ಲ. ಇದರಿಂದ ಕೆರಳಿದ ತಂದೆ ನನ್ನ ಮೇಲೆ ಕೈ ಮಾಡಲು ಯತ್ನಿಸಿದರು. ಆಗ ನಾನು ತಿರುಗಿ ಬಿದ್ದೆ ಮತ್ತು ನನಗೆ ಹೊಡೆದರೇ ನಾನು ನಿಮಗೆ ತಿರುಗಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ. ಅಂದೇ ನಮ್ಮ ಸಂಬಂಧ ಕೊನೆಯಾಯಿತು ಎಂದಿದ್ದಾರೆ.
ಆ ಘಟನೆಯಿಂದ ನಾನು ನನ್ನ ಗಡಿ ದಾಟಿದೆ ಎಂಬುದು ಗೊತ್ತಾಯಿತು ಮತ್ತು ನಾನು ಸ್ವಾತಂತ್ರ್ಯಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎಂಬುದು ಗೊತ್ತಾಯಿತು. ಅಲ್ಲದೇ ನನ್ನನ್ನು ಯಾರು ಪಂಜರದಲ್ಲಿ ಇಡಲು ಸಾಧ್ಯವಿಲ್ಲ ಎಂಬುದು ಅರ್ಥವಾಯಿತು . ಯಶಸ್ಸು ನನ್ನ ತಲೆಗೇರಿದೆ ಎಂದು ಇಂಡಸ್ಟ್ರಿ ಜನ ತಿಳಿದುಕೊಂಡಿದ್ದಾರೆ.

ಆದರೆ 15 ವರ್ಷಕ್ಕೆ ಮನೆ ಬಿಟ್ಟು ಬಂದು ಬದುಕಿದ ರೆಬೆಲ್ ಮಹಿಳೆ ನಾನು ಎಂಬುದನ್ನು ಚಿಲ್ಲರೆ ಇಂಡಸ್ಟ್ರಿ ತಿಳಿದುಕೊಳ್ಳಬೇಕು. ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದುಕೊಂಡವರಿಗೆ ನಾನೇ ಹದ್ದುಬಸ್ತಿನಲ್ಲಿ ಇಡುವಷ್ಟು ಈಗ ಬೆಳೆದಿದ್ದೇನೆ ಎಂದು ತಮ್ಮ ರೆಬೆಲ್ ವ್ಯಕ್ತಿತ್ವವನ್ನು ಸಾರಿದ್ದಾರೆ.

ಈ ಹಿಂದೆಯೇ ಒಮ್ಮೆ ತಮ್ಮ ಮೇಲೆ ಬಾಲ್ಯದಲ್ಲೇ ಲೈಂಗಿಕ ದೌರ್ಜನ್ಯ ನಡೆದಿದ್ದು ಮತ್ತೆ ತಮ್ಮನ್ನು ಕೂಡಿಹಾಕಿದ್ದ ವ್ಯಕ್ತಿ ಸೌದಿ ದೊರೆಗಳಿಗೆ ಮಾರಲು ಯತ್ನಿಸಿದ ವಿಚಾರವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದರು.

ಕಂಗನಾ ತಂದೆಗೆ ಹೊಡೆಯಲು ಯತ್ನಿಸಿದ್ದರು ಎಂಬ ಟ್ವೀಟ್ ಬಯಲಾಗುತ್ತಿದ್ದಂತೆ ಬಾಲಿವುಡ್ ಮಂದಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದು ಹಲವರು ಶಾಕ್ ವ್ಯಕ್ತಪಡಿಸಿದ್ದರೇ ಇನ್ನು ಕೆಲವರು ಕಂಗನಾ ಬಗ್ಗೆ ಇಂಥಹ ವಿಷಯವೇನು ಶಾಕಿಂಗ್ ಅಲ್ಲ ಅಂತಿದ್ದಾರೆ.