ಮಂಗಳವಾರ, ಜೂನ್ 17, 2025
HomeBreakingRanumandal: ಮಿಸ್ ರಾನು ಮಾರಿಯಾ: ತೆರೆ ಬರ್ತಿದೆ ರಾತ್ರೋರಾತ್ರಿ ಸ್ಟಾರ್ ಆದ ಗಾಯಕಿ ಕಹಾನಿ

Ranumandal: ಮಿಸ್ ರಾನು ಮಾರಿಯಾ: ತೆರೆ ಬರ್ತಿದೆ ರಾತ್ರೋರಾತ್ರಿ ಸ್ಟಾರ್ ಆದ ಗಾಯಕಿ ಕಹಾನಿ

- Advertisement -

ಅದೃಷ್ಟ ಖುಲಾಯಿಸಿದಾಗ ಬೀದಿಯಲ್ಲಿ ಇದ್ದವರು ಉಪ್ಪರಿಗೆ ಏರಬಹುದು. ಈ ಮಾತಿಗೆ ಸಾಕ್ಷಿಯಾದವರು ರೈಲ್ವೇ ಸ್ಟೇಶನ್ ನಲ್ಲಿ ಹಾಡುತ್ತಿದ್ದ ಭಿಕ್ಷುಕಿ ರಾನುಮಂಡಲ್. ಆದರೆ ಕೀರ್ತಿಯ ಉತ್ತುಂಗಕ್ಕೆ ಏರಿದ ವೇಗದಲ್ಲೇ ಇಳಿದ ರಾನು ಮಂಡಲ್ ಕಹಾನಿ ತೆರೆಗೆ ಬರಲು ಸಿದ್ಧವಾಗಿದೆ.

Ranu Mandal 1

ಮಿಸ್ ರಾನು ಮಾರಿಯಾ ಸಿನಿಮಾ ತೆರೆಗೆ ಬರಲಿದೆ. ರಾನು ಮಂಡಲ್ ಪಬ್ಲಿಸಿಟಿ ಪಡೆದಿದ್ದು ಹಾಗೂ ಬಳಿಕ ಅವಕಾಶಗಳಿಂದ ವಂಚಿತರಾಗಿ ಮತ್ತೆ ಬೀದಿ ಬದಿಗೆ ಹಾಡಲು ಬಂದ ಅಸಲಿ ಕತೆ ಸೆಟ್ಟೇರಲಿದೆ. ಆದರೆ ರಾನು ಮಂಡಲ್ ಬಯೋಪಿಕ್ ತೆರೆಗೆ ತರಲು ಯಾರು ಚಿತ್ರ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

Ranu 303

ರೈಲ್ವೇ ಸ್ಟೇಶನ್ ನಲ್ಲಿ ಹಾಡಿ ಅದರಿಂದ ಬಂದ ಹಣದಲ್ಲಿ ಬದುಕುತ್ತಿದ್ದ ರಾನು ಮಂಡಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಹಿಮೇಶ್ ರೇಷಮಿಯಾ ರಾನುಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದರು.

Ranu 42

ಈ ಅವಕಾಶದಿಂದ ರಾನು ಮಂಡಲ್ ಜೀವನದ ಸ್ಥಿತಿಯೇ ಬದಲಾಗಿತ್ತು. ಸಾಕಷ್ಟು ಪ್ರಸಿದ್ಧಿ ಪಡೆದ ರಾನುಮಂಡಲ್ ರಿಯಾಲಿಟಿ ಶೋಗಳನ್ನು ಭಾಗವಹಿಸಿದ್ದರು. ಆದರೆ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿದ್ದಂತೆ ಬದಲಾದ ರಾನುಮಂಡಲ್ ವರಸೆ ಆಕೆಯನ್ನು ಅವಕಾಶಗಳಿಂದ ವಂಚಿತರಾಗುವಂತೆ ಮಾಡಿತು.

ಪ್ರಸಿದ್ಧಿಗೆ ಬರುತ್ತಿದ್ದಂತೆ ವಾಸಸ್ಥಳವನ್ನು ರೈಲ್ವೆ ಸ್ಟೇಶನ್ ನಿಂದ ಅಪಾರ್ಟಮೆಂಟ್ ಗೆ ಬದಲಾಯಿಸಿದ ರಾನುಮಂಡಲ್ ಲಾಕ್ ಡೌನ್ ನಿಂದ ಅವಕಾಶ ಇಲ್ಲದೇ, ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದು, ಈಗ ಮತ್ತೆ ಬೀದಿಗೆ ಬಂದಿದ್ದಾರೆ ಎನ್ನಲಾಗಿದೆ.

ಈ ಕತೆಯನ್ನೇ ತೆರೆಗೆ ತರಲು ಸಿದ್ಧತೆ ನಡೆದಿದ್ದು, ರಾನು ಮಂಡಲ್ ಪಾತ್ರದಲ್ಲಿ ಇಶಿಕಾ ಡೇ ನಟಿಸಲಿದ್ದು, ಈ ಪಾತ್ರಕ್ಕಾಗಿ 10 ಕೆಜಿ ತೂಕ ಇಳಿಸುತ್ತಿದ್ದಾರಂತೆ. ಹಿಮೇಶ್ ರೇಷಮಿಯಾ ಪಾತ್ರದಲ್ಲಿ ಸ್ವತಃ ಹಿಮೇಶ್ ರೇಷಮಿಯಾನೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Ishika Dey will be in the lead role in Ranu Mandal’s biopic

RELATED ARTICLES

Most Popular