ಅನಾರೋಗ್ಯದಿಂದ ನಿಧನರಾದ ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೂ ಕನ್ನಡದ ದೊಡ್ಮನೆಯೊಂದಿಗೆ ನಂಟಿತ್ತು. ಡಾ.ರಾಜ್ ಕುಮಾರ್ ಅವರೊಂದಿಗೆ ಸ್ನೇಹಹೊಂದಿದ್ದ ದಿಲೀಪ್ ಕುಮಾರ್ ಅವರ ನೆನಪುಗಳನ್ನು ಪುನೀತ್ ರಾಜಕುಮಾರ್ ಹಂಚಿಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಪುಟ್ಟ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಖ್ಯಾತ ನಟ ದಿಲೀಪ್ ಕುಮಾರ್ ಅವರೊಂದಿಗೆ ಅಪ್ಪಾಜಿ ಇರುವ ಮರೆಯಲಾಗದ ನೆನಪುಗಳು ಎಂದಿದ್ದಾರೆ.

https://www.instagram.com/p/CRD4VypCrLi/?utm_medium=copy_link
30 ಸೆಕೆಂಡ್ ಗಳ ವಿಡಿಯೋದಲ್ಲಿ ಡಾ.ರಾಜಕುಮಾರ್ ಹಾಗೂ ದೀಲೀಪ್ ಕುಮಾರ್ ಇರುವ ಪೋಟೋಗಳನ್ನು ಪುನೀತ್ ಹಂಚಿಕೊಂಡಿದ್ದು, ಅದರಲ್ಲಿ ದೀಲಿಪ್ ಕುಮಾರ್ ಅಮಿತಾಬ್ ಬಚ್ಚನ್ ಜೊತೆ ಡಾ.ರಾಜ್ ಇದ್ದಾರೆ.

ಅಲ್ಲದೇ ಒಂದು ಪೋಟೋದಲ್ಲಿ ಪುಟಾಣಿ ಪುನೀತ್ ರಾಜಕುಮಾರ್ ಅವರನ್ನು ದೀಲೀಪ್ ಕುಮಾರ್ ಪ್ರೀತಿಯಿಂದ ಹಿಡಿದುಕೊಂಡಿರೋ ಪೋಟೋ ಕೂಡ ಇದೆ.

ಬಾಲಿವುಡ್ ನ ದಂತಕತೆ ದಿಲೀಪ್ ಕುಮಾರ್ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಪುನೀತ್ ಹಾಗೂ ಸ್ಯಾಂಡಲ್ ವುಡ್ ನಟರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.