ನವದೆಹಲಿ : ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಭಾರೀ ಬದಲಾವಣೆಯಾಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ಕೊಟ್ಟಿಲ್ಲ. ಬದಲಾಗಿ ಹಳೆಯ ತೆರಿಗೆ ಪದ್ದತಿಯನ್ನೇ ಮುಂದುವರಿಸುವುದಾಗಿ ಘೋಷಣೆಯನ್ನು ಮಾಡಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವೈಯಕ್ತಿಯ ಆದಾಯ ತೆರಿಗೆಯಲ್ಲಿ ಯಾವುದೇ ವಿನಾಯಿತಿಯನ್ನು ಘೋಷಿಸಿಲ್ಲ. ಹೀಗಾಗಿ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ 2.50 ಲಕ್ಷ ರೂಪಾಯಿವರೆಗೆ ಆದಾಯವನ್ನು ಹೊಂದಿದವರಿಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.
ಉಳಿದಂತೆ 2.5 ಲಕ್ಷದ ವರೆಗೆ ಯಾವುದೇ ತರಿಗೆಯನ್ಉ ಪಾವತಿ ಮಾಡುವಂತಿಲ್ಲ. 2.5 ಲಕ್ಷ ರೂ. ನಿಂದ 5 ಲಕ್ಷ ರೂಪಾಯಿ ಆದಾಯ ಹೊಂದಿದವರು ಶೇ.5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇನ್ನು 5 ಲಕ್ಷದಿಂದ 7.50 ಲಕ್ಷ ಆದಾಯ ಹೊಂದಿದವರು ಶೇ. 10ರಷ್ಟು ತೆರಿಗೆ, 7.50 ರಿಂದ 10 ಲಕ್ಷ ಆದಾಯಕ್ಕೆ ಶೇ.15, 10 ರಿಂದ 12.50 ಲಕ್ಷ ಆದಾಯ ಹೊಂದಿದವರಿಗೆ ಶೇ.20, 12.50 ರಿಂದ 15 ಲಕ್ಷ ಆದಾಯ ಹೊಂದಿವರು ಶೇ.25 ರಷ್ಟು ಹಾಗೂ 15 ಲಕ್ಷಕ್ಕೂ ಅಧಿಕ ಆದಾಯ ಹೊಂದಿದವರು ಶೇ.30 ರಷ್ಟು ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ.