ನವದೆಹಲಿ : ದೇಶದಾದ್ಯಂತ ಕೊರೋನಾ ಎಮರ್ಜೆನ್ಸಿ ಹೇರಿಕೆಯಾಗಿರುವುದರಿಂದ ದೇಶದ ಜನರ ಅನುಕೂಲಕ್ಕಾಗಿ ಕೇಂದ್ರ ಸರಕಾರ 1.7 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ ಯೋಜನೆಯನ್ನು ಘೋಷಿಸಿದ್ದಾರೆ. ಕೊರೊನಾ ವಿರುದ್ದ ಹೋರಾಡುತ್ತಿರುವವರಿಗೆ 15 ಲಕ್ಷ ರೂಪಾಯಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, 3 ತಿಂಗಳ ಕಾಲ 50 ಲಕ್ಷ ರೂಪಾಯಿ ವಿಮೆಯನ್ನು ಒದಗಿಸಲಾಗುತ್ತದೆ ಎಂದಿದ್ದಾರೆ.
ದೇಶದ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲ ಬಾರದು. ಹೀಗಾಗಿ 80 ಕೋಟಿ ಜನರಿಗೆ 5 ಕೆ.ಜಿ. ಅಕ್ಕಿ 5 ಕೆ.ಜಿ. ಗೋಧಿಯ ಮುಂದಿನ ಮೂರು ತಿಂಗಳ ಪಡಿತರವನ್ನು ಉಚಿತವಾಗಿ ನೀಡುವುದರ ಜೊತೆಗೆ 1 ಕೆ.ಜಿ. ಬೇಳೆಯನ್ನು ನೀಡಲಾಗುತ್ತದೆ. ಬಡವರು ಮತ್ತು ವಲಸೆ ಕಾರ್ಮಿಕಾರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಗರೀಬ್ ಕಲ್ಯಾಣ ಯೋಜನೆ ಜಾರಿ. ಬಡವರ ಖಾತೆಗಳಿಗೆ ನೇರ ಹಣ ವರ್ಗಾಯಿಸಲಾಗುತ್ತದೆ ಎಂದಿದ್ದಾರೆ.
ರೈತರು, ಜನ್ ಧನ್ ಖಾತೆಯ ಮೂಲಕ ನೇರವಾಗಿ ಹಣ ವರ್ಗಾವಣೆ. ಕಿಸಾನ್ ಸಮ್ಮಾನ್ ಯೋಜನೆಯಿಂದ 6,000 ಕೋಟಿ ರೂಪಾಯಿ ನೀಡಲಾಗುತ್ತಿದೆ. ಮೊದಲ ಕಂತಿನಲ್ಲಿ 2,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗುತ್ತೆ. ದೇಶದ 8.69 ಕೋಟಿ ರೈತರು ಈ ಯೋಜನೆಯನ್ನು ಪಡೆಯಲಿದ್ದಾರೆ. ಕೃಷಿ ಕಾರ್ಯಗಳಿಗೆ ನರೇಗಾ ಹಣ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಆಯಾಯಾ ಜಿಲ್ಲಾಧಿಕಾರಿಗಳಿಗೆ ಹಣ ಬಳಕೆ ಮಾಡಲು ಅಧಿಕಾರ ನೀಡಲಾಗಿದೆ. ವೃದ್ದೆಯರು, ದಿವ್ಯಾಂಗರು, ವಿಧವೆಯರಿಗೆ 1 ಸಾವಿರ ರೂಪಾಯಿ ಸಹಾಯಧನ. ಎರಡು ಕಂತುಗಳಲ್ಲಿ ಹಣ ನೀಡಲಾಗುತ್ತಿದೆ. ಇನ್ನು 20 ಕೋಟಿ ಮಹಿಳಾ ಜನ್ ಧನ್ ಖಾತೆಯನ್ನು ಹೊಂದಿರುವವರಿಗೆ ಪ್ರತೀ ತಿಂಗಳು 500 ರೂಪಾಯಿಯಂತೆ ಮೂರು ತಿಂಗಳ ಕಾಲ ನೀಡಲು ಉದ್ದೇಶಿಸಲಾಗಿದೆ ಎಂದರು.
ಉಜ್ವಲ ಯೋಜನೆಯಲ್ಲಿ ಗ್ಯಾಸ್ ಪಡೆಯುತ್ತಿರುವ ಸುಮಾರು 8.03 ಕೋಟಿ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಗ್ಯಾಸ್ ಸಿಲಿಂಡರ್ ಒದಗಿಸಲು ಯೋಜನೆ ರೂಪಿಸಲಾಗಿದೆ. ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೂ ಬಿಗ್ ರಿಲೀಫ್ ನೀಡಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ 10 ರಿಂದ 20 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲು ಮುಂದಾಗಿದ್ದು, 20 ಲಕ್ಷದ ವರೆಗೆ ಭದ್ರತೆ ರಹಿತ ಸಾಲ ನೀಡಲಾಗುತ್ತಿದೆ. ಈ ಯೋಜನೆಯಿಂದಾಗಿ ಸುಮಾರು 63 ಲಕ್ಷ ಸ್ವಸಹಾಯ ಸಂಘಗಳಿಗೆ ಅನುಕೂಲವಾಗಲಿದೆ ಎಂದರು.
ಕೈಗಾರಿಕಾ ಕ್ಷೇತ್ರಕ್ಕೂ ಬಿಗ್ ರಿಲೀಫ್ ನೀಡಿದೆ. ಸಂಘಟಿತ ಕ್ಷೇತ್ರದ ಕಾರ್ಮಿಕರ ಮುಂದಿನ 3 ತಿಂಗಳುಗಳ ಕಾಲ ಇಪಿಎಫ್ ಹಣವನ್ನು ಕೇಂದ್ರ ಸರಕಾರವೇ ಪಾವತಿಸಲಿದೆ. ನೌಕರರು ಶೇ.12 ಮತ್ತು ಕೇಂದ್ರದ ಪಾಲು ಶೇ.12 ಸೇರಿ ಒಟ್ಟು ಶೇ.24ರಷ್ಟು ಹಣವನ್ನು ಕೇಂದ್ರ ಸರಕಾರವೇ ಪಾವತಿಸಲಿದೆ. 100 ನೌಕರರಿರುವ ಕಂಪೆನಿಗಳಿಗೆ ಈ ನಿಯಮ ಅನ್ವಯವಾಗಲಿದೆ. 15 ಸಾವಿರ ಕ್ಕಿಂತ ಕಡಿಮೆ ಸಂಬಳ ಅಥವಾ 90ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವವರು ಇಪಿಎಫ್ ಹಣವನ್ನು ಪಾವತಿ ಮಾಡುವಂತಿಲ್ಲ. ಅಲ್ಲದೇ ಪಿಎಫ್ ಪಂಡ್ ನಿಂದ ಶೇ.75ರಷ್ಟು ಹಣವನ್ನು ಪಡೆಯಲು ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ.
ಕೊರೊನಾ ಎಮರ್ಜೆನ್ಸಿ : ಕೇಂದ್ರದಿಂದ 1.7 ಲಕ್ಷ ಕೋಟಿ ವಿಶೇಷ ಪ್ಯಾಕೇಜ್
- Advertisement -