ಕೇಂದ್ರದ ಕೃಷಿನೀತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ತಿಂಗಳುಗಳಿಂದ ನಡೀತಿರೋ ಈ ಪ್ರತಿಭಟನಾ ಸ್ಥಳವೇ ಈಗ ಮದುವೆ ಛತ್ರವಾಗಿ ಬದಲಾಗಿದ್ದು ನವಜೋಡಿಯೊಂದು ಸಪ್ತಪದಿ ತುಳಿದಿದೆ.
ಪ್ರತಿಭಟನಾ ವೇದಿಕೆಯ ಬಳಿಯೇ ಫಾರ್ಮರ್ ಯೂನಿಯನ್ ಲೀಡರ್ ಒಬ್ಬರು ತಮ್ಮ ಪುತ್ರನ ಮದುವೆ ಮಾಡಿಮುಗಿಸುವ ಮೂಲಕ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂಬ ಸೂಚನೆ ನೀಡಿದಂತಿದೆ.

ಮಧ್ಯಪ್ರದೇಶದ ಭೂಪಾಲ ಮೂಲದ ರೈತ ಹೋರಾಟಗಾರ ರಾಮಜಿತ್ ತಮ್ಮ ತಾಯ್ನೆಲದಿಂದ ೫೦೦ ಕಿಲೋಮೀಟರ್ ದೂರದಲ್ಲಿರೋ ಪ್ರತಿಭಟನಾ ಸ್ಥಳದಲ್ಲೇ ಮದುವೆ ಮಂಟಪ ಮಾಡಿಮಗನ ಮದುವೆ ಮಾಡಿದ್ದಾರೆ.

ರೈತರ ಮಕ್ಕಳಾದ ಸಚಿನ್ ಹಾಗೂ ಅಸ್ಮಾ ರೈತರ ಸಮ್ಮುಖದಲ್ಲೇ ಸಪ್ತಪದಿ ತುಳಿದಿದ್ದಾರೆ. ಮದುವೆಯ ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜ್ಯೋತಿಬಾಫುಲೆ ಪೋಟೋ ಇಡಲಾಗಿತ್ತು. ಇದಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಯುವಜೋಡಿ ದಾಂಪತ್ಯ ಕ್ಕೆ ಕಾಲಿರಿಸಿದೆ.
ಮದುವೆಯಲ್ಲಿ ವಧು-ವರನ ಕೆಲಸಂಬಂಧಿಕರು ಪಾಲ್ಗೊಂಡಿದ್ದರು. ನೂತನ ವಧು ವರ ತಮಗೆ ಕಾಣಿಕೆಯಾಗಿ ಬಂದ ವಸ್ತುಗಳನ್ನು ಪ್ರತಿಭಟನಾ ನಿರತ ರೈತರಿಗೆ ನೀಡುವ ಮೂಲಕ ರೈತರ ಹೋರಾಟಕ್ಕೆ ಸ್ಪಂದಿಸಿದ್ದಾರೆ.

ಈ ಮದುವೆ ಕುರಿತು ಮಾತನಾಡಿದ ರೈತ ಮುಖಂಡ ರಾಮ್ ಜಿತ್,ಮಗನ ಮದುವೆಯ ಹೆಸರಲ್ಲಿ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿ ಇಲ್ಲೇ ಮದುವೆ ಮಾಡಿದ್ದೇನೆ. ಇದರ ಮೂಲಕಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇನೆ. ನಾನು ಯಾವುದೇ ವರದಕ್ಷಿಣೆ ಪಡೆಯದೇ ಮದುವೆ ಮಾಡಿರೋದು ಇನ್ನೊಂದು ವಿಶೇಷ ಎಂದಿದ್ದಾರೆ.