ಸೋಮವಾರ, ಜೂನ್ 16, 2025
HomeBreakingLIVE SUICIDE : ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಕನ್ನಡದ ನಟಿ

LIVE SUICIDE : ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಕನ್ನಡದ ನಟಿ

- Advertisement -

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಮೋಸ ಮಾಡಿದ ಹಿನ್ನೆಲೆ ಕನ್ನಡದ ನಟಿಯೊಬ್ಬಳು ಸೆಲ್ಪೀ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಬೆಂಗಳೂರಿನ ಕೃಷ್ಣಮೂರ್ತಿ ಲೇಔಟ್ ನಲ್ಲಿ ವಾಸವಾಗಿದ್ದ ಚಂದನಾ ತಾನು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಸೆಲ್ಪಿ ವಿಡಿಯೋ ಮಾಡಿದ್ದಾರೆ.

ನಟಿ ಚಂದನಾ ಹಾಗೂ ದಿನೇಶ್ ಎಂಬಾತನನ್ನು ಕಳೆದ ಐದು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ ಚಂದನಾಳಿಂದ 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾನೆ. ಮಾತ್ರವಲ್ಲ ದೈಹಿಕವಾಗಿಯೂ ಬಳಸಿಕೊಂಡಿದ್ದಾನೆ. ಕುಂಟು ನೆಪವೊಡ್ಡಿ ಗರ್ಭಿಣಿಯಾಗಿದ್ದ ಚಂದನಾಳಿಗೆ ಗರ್ಭಪಾತ ಮಾಡಿಸಿದ್ದಾನೆ. ನಂತರ ತಾನು ಮದುವೆಯಾಗುವುದಿಲ್ಲವೆಂದು ಚಂದನಾಳಿಗೆ ಬೆದರಿಕೆಯೊಡ್ಡಿದ್ದಾನೆ.

ಇದರಿಂದ ಮನನೊಂದ ನಟಿ ಚಂದನಾ ಮೇ 31 ರಂದು ಸೆಲ್ಫೀ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಾಸನ ಜಿಲ್ಲೆಯ ಬೇಲೂರಿನ ನಿವಾಸಿಯಾಗಿರೋ ಚಂದನಾ ನಟಿಯಾಗಬೇಕೆಂಬ ಕನಸು ಕಂಡಿದ್ದಳು. ಮಾಡೆಲಿಂಗ್, ಜಾಹೀರಾತು, ಸಿನಿಮಾ ಕ್ಷೇತ್ರಗಳಲ್ಲಿಯೂ ತನ್ನನ್ನ ತೊಡಿಸಿಕೊಂಡಿದ್ದಳು. ಆದ್ರೆ ಪ್ರೀತಿಸಿ ಮೋಸ ಮಾಡಿದ ಕಾರಣಕ್ಕೆ ಇಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ದಿನೇಶ್ ಚಂದನಾಳಿಂದ 5 ಲಕ್ಷ ರುಪಾಯಿ ಹಣ ಪಡೆದು ವಂಚಿಸಿದ್ದಾನೆ.

ನಂತರ ಚಂದನಾ ಮನೆಯವರು ಕೂಡ ದಿನೇಶ್ ಬಳಿ ಮದುವೆಯಾಗುವಂತೆ ಕೇಳಿಕೊಂಡಿದ್ದಾರೆ. ತನಗೆ 5 ಲಕ್ಷ ರೂಪಾಯಿ ಹಣ ನೀಡಿದ್ರೆ ಮದುವೆಯಾಗುವುದಾಗಿ ಹೇಳಿದ್ದ. ಚಂದನಾ ಪೋಷಕರು ಹಣ ನೀಡುವುದಕ್ಕೆ ಒಪ್ಪುತ್ತಿದ್ದಂತೆಯೇ ದಿನೇಶ್ ಮದುವೆಯಾಗಲಿ ನಿರಾಕರಿಸಿದ್ದನಂತೆ. ಈ ಕುರಿತು ಸುದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಮನೆಯವರಿಂದಲೂ ವಿರೋಧ : ದಿನೇಶ್ ತನಗೆ ಮೋಸ ಮಾಡಿರುವ ಕುರಿತು ಚಂದನಾ ದಿನೇಶ್ ಮನೆಗೆ ತೆರಳಿ ಮದುವೆ ಮಾಡಿಸುವಂತೆ ವಿನಂತಿಸಿಕೊಂಡಿದ್ದಾಳೆ. ಆದ್ರೆ ದಿನೇಶ್ ಮನೆಯವರೂ ಕೂಡ ಚಂದನಾ ನಡೆತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅಂತಾ ಚಂದನಾ ಪೋಷಕರು ಆರೋಪಿಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular