ಬ್ರಹ್ಮಾವರ : ಕೈಕಾಲು ತೊಳೆಯರು ಮದಗದ ಕೆರೆಗೆ ಇಳಿದಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರಿನಲ್ಲಿ ನಡೆದಿದೆ.
ಚಾಂತಾರು ನಿವಾಸಿ ಮಹೇಶ್ (20 ವರ್ಷ) ಹಾಗೂ ನಿಶಾಂತ್ 13 ವರ್ಷ) ಎಂಬವರೇ ನೀರುಪಾಲಾದವರು. ಮನೆಯಯಲ್ಲಿ ಗೊಬ್ಬರ ತೆಗೆದು ಇಬ್ಬರೂ ಸ್ನಾನ ಮಾಡುವುದಕ್ಕೆ ಚಾಂತಾರಿನ ಮದಗದ ಕೆರೆಗೆ ಬಂದಿದ್ದಾರೆ. ಈ ವೇಳೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿರುವ ನಿಶಾಂತ್ ಮದಗದ ಕೆರೆಯಲ್ಲಿ ಮುಳುಗುವುದಕ್ಕೆ ಆರಂಭಿಸಿದ್ದ. ಈ ವೇಳೆ ನಿಶಾಂತ್ ರಕ್ಷಣೆಗೆ ಮದಗಕ್ಕೆ ಇಳಿದ ಮಹೇಶ್ ಕೂಡ ನೀರುಪಾಲಾಗಿದ್ದಾರೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಂತಾರು ಮದಗದ ಕೆರೆಯಲ್ಲಿ ಇಬ್ಬರು ನೀರುಪಾಲು
- Advertisement -
RELATED ARTICLES