(Children Eat Soil)ಸಣ್ಣ ಮಕ್ಕಳಿಗೆ ಏನೇ ವಸ್ತು ಕೊಟ್ಟರು ಬಾಯಿಗೆ ಹಾಕುವ ಹವ್ಯಾಸವಿರುತ್ತದೆ. ಎಷ್ಟೇ ಮಕ್ಕಳ ಬಗ್ಗೆ ಗಮನ ಕೊಟ್ಟರು ಸಾಕಾಗುವುದಿಲ್ಲ. ನೆಲದಲ್ಲಿ ಆಡಲು ಬಿಟ್ಟಾಗ ಸ್ವಲ್ಪ ಮೈ ಮರೆತರು ಕೈಗೆ ಸಿಕ್ಕ ವಸ್ತು ಬಾಯಿಗೆ ಹೋಗುತ್ತದೆ. ಕೆಲವೊಮ್ಮೆ ಗೋಡೆಯನ್ನು ಕೆರೆದು ಅದರಿಂದ ಉದುರಿದ ಪುಡಿಯನ್ನು ತಿನ್ನುತ್ತಾರೆ ಮತ್ತು ಅಂಗಳದಲ್ಲಿ ಆಟವಾಡಲು ಬಿಟ್ಟಾಗ ಮಣ್ಣನ್ನು ಬಾಯಿಗೆ ಹಾಕುವುದುಂಟು.
(Children Eat Soil)ಮಕ್ಕಳು ಮಣ್ಣು ತಿನ್ನಲು ಕಾರಣ
ದೇಹದಲ್ಲಿ ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣದ ಕೊರತೆ ಇದ್ದರೆ ಮಗು ಮಣ್ಣು ತಿನ್ನಲು ಪ್ರಾರಂಭಿಸುತ್ತದೆ. ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಮಕ್ಕಳು ಮಣ್ಣು ತಿನ್ನುತ್ತಾರೆ . ಕೆಲವು ಮಕ್ಕಳು ಊಟ ಮಾಡುವುದಕ್ಕೆ ಹಠ ಮಾಡುತ್ತಾರೆ ಹಾಗಾಗಿ ಮಕ್ಕಳ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುವುದಿಲ್ಲ. ಇದರಿಂದಾಗಿ ಮಕ್ಕಳು ಮಣ್ಣು ತಿನ್ನಲು ಪ್ರಾರಂಬಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ಎರಡು ವರ್ಷದ ನಂತರ ಎದೆ ಹಾಲು ಕುಡಿಸುವುದನ್ನು ನಿಲ್ಲಿಸುತ್ತಾರೆ. ಆದರೆ ಕೆಲವರು ಎರಡು ವರ್ಷದ ನಂತರವೂ ಎದೆ ಹಾಲು ಕುಡಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಹಸಿವು ಕಡಿಮೆ ಆಗುತ್ತದೆ. ಹಾಗಾಗಿ ಮಕ್ಕಳು ಮಣ್ಣು ತಿನ್ನಲು ಪ್ರಾರಂಭಿಸುತ್ತಾರೆ.
ಮಣ್ಣು ತಿನ್ನುವ ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳು:
- ಮಣ್ಣು ತಿನ್ನುವ ಮಕ್ಕಳ ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
- ಮಗು ಬಹಳ ಬೇಗ ಸುಸ್ತಾಗುತ್ತದೆ.
- ಕಾಲು ನೋವು ಕಾಣಿಸಿಕೊಳ್ಳುತ್ತದೆ
- ಹೊಟ್ಟೆನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ
ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಕೂಡಲೇ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಔಷಧಿ ಮಾಡಿಸಿ. ಮತ್ತು ಮನೆಯಲ್ಲೇ ಕೆಲವು ಮುನ್ನೆಚ್ಚರಿಕೆ ಪಾಲನೆ ಮಾಡುವ ಮೂಲಕ ನಿಮ್ಮ ಮಗು ಮಣ್ಣು ತಿನ್ನದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ:Healthy Food :ಪದೇ ಪದೇ ಆಯಾಸವಾಗುತ್ತಿದೆಯೇ ? ಹಾಗಿದ್ರೆ ಈ ಆಹಾರ ಸೇವನೆ ಮಾಡಿ
ಮಕ್ಕಳಲ್ಲಿ ಮಣ್ಣು ತಿನ್ನುವ ಅಭ್ಯಾಸವನ್ನು ಹೇಗೆ ತಡೆಯುವುದು
*ಕಬ್ಬಿಣ, ವಿಟಮಿನ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್ ಅಂಶ ಇರುವ ಆಹಾರವನ್ನು ಸೇವನೆ ಮಾಡಲು ಕೊಡಬೇಕು.
*ಸಣ್ಣ ಮಕ್ಕಳನ್ನು ಆಟವಾಡಲು ಬಿಟ್ಟಾಗ ಆಟಿಕೆ ಕೊಡುವ ಬದಲು ಕ್ಯಾರೆಟ್, ಬೀನ್ಸ್ ಕೊಟ್ಟರೆ ಅದನ್ನು ಬಾಯಿಗೆ ಹಾಕುವುದರಿಂದ ಸುರಕ್ಷಿತವಾಗಿರುತ್ತದೆ.
*ಆಗಾಗ ಜಂತಿನ ಔಷಧಿ ಕೊಡಿ
*ಮಗು ಆಟ ಆಡುವಾಗ ಆದಷ್ಟು ಹತ್ತಿರವಿರಿ
Children Eat Soil Is it a hobby for your children to eat soil? If so how to resolve this