ಸೋಮವಾರ, ಏಪ್ರಿಲ್ 28, 2025
HomeBreakingChiranjeevi sarja:ಚಿರುವನ್ನೇ ಮತ್ತೆ ವಾಪಸ್ ಪಡೆದಂತಾಯಿತು….! ಹೃದಯಸ್ಪರ್ಶಿ ಪೋಟೋ ಜೊತೆ ಸ್ನೇಹಿತನ ನೆನಪು ಹಂಚಿಕೊಂಡ...

Chiranjeevi sarja:ಚಿರುವನ್ನೇ ಮತ್ತೆ ವಾಪಸ್ ಪಡೆದಂತಾಯಿತು….! ಹೃದಯಸ್ಪರ್ಶಿ ಪೋಟೋ ಜೊತೆ ಸ್ನೇಹಿತನ ನೆನಪು ಹಂಚಿಕೊಂಡ ಪನ್ನಗಾಭರಣ…!!

- Advertisement -

ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರು ಸರ್ಜಾ ಅಜಾತ ಶತ್ರು ಎಂತಲೇ ಹೆಸರಾದವರು. ತನ್ನದೇ ಆದ ಸ್ನೇಹಿತರ ವಲಯ ಹೊಂದಿದ್ದ ಚಿರು ಇನ್ನಿಲ್ಲವಾದರೂ ಆತನ ಸ್ನೇಹಿತರು ಮಾತ್ರ ಪ್ರತಿನಿತ್ಯ ಚಿರುವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪನ್ನಗಾಭರಣ ಕೂಡ ಇದಕ್ಕೆ ಹೊರತಲ್ಲ. ಇದೀಗ ಚಿರು ನೆನಪಲ್ಲಿ ಜ್ಯೂನಿಯರ್ ಚಿರು ಜೊತೆ ಸ್ಪೆಶಲ್ ಪೋಟೋ ಹಂಚಿಕೊಂಡಿದ್ದಾರೆ.

ಜ್ಯೂನಿಯರ್ 7 ತಿಂಗಳಿಗೆ ಕಾಲಿಟ್ಟಿದ್ದು, ತನ್ನ ತಂದೆಯ ಪೋಟೋ, ಡ್ಯಾನ್ಸ್ ನೋಡಿ ಎಂಜಾಯ್ ಮಾಡ್ತಿದ್ದಾನೆ. ಈ ಮಧ್ಯೆ ಸದಾ ಚಿರುವನ್ನು  ನೆನಪಿಸಿಕೊಳ್ಳುವ ಆತನ ಸ್ನೇಹಿತ ಹಾಗೂ ನಿರ್ದೇಶಕ ಪನ್ನಗಾಭರಣ ಇತ್ತೀಚಿಗೆ  ಮೇಘನಾ ರಾಜ್ ನಿವಾಸಕ್ಕೆ ಭೇಟಿ ನೀಡಿದ್ದು, ಜೂನಿಯರ್ ಚಿರು ಜೊತೆ ಸಮಯ ಕಳೆದಿದ್ದಾರೆ.

ಅಷ್ಟೇ ಅಲ್ಲ ಜ್ಯೂನಿಯರ್ ಚಿರುವನ್ನು ತೋಳಿನಲ್ಲಿ ಎತ್ತಿಕೊಂಡಿದ್ದಾರೆ. ಆ ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವನು ನನ್ನನ್ನು ಪ್ರೀತಿಯಿಂದ  ನೋಡುವ ರೀತಿಗೆ ನನಗೆ  ಇಷ್ಟವಾಯಿತು. ಸೇಮ್  ಚಿರುವಿನಂತೆಯೇ ಇದೆ.  

ಆ ನೋಟದಲ್ಲಿ ಜ್ಯೂನಿಯರ್ ಚಿರು ನನ್ನನ್ನು ನಾನು ನಿನಗೆ ವಾಪಸ್  ಸಿಕ್ಕಿದೆ ಎಂದು ಭಾವಿಸುತ್ತೇನೆ ಅಲ್ಲವೇ ಎಂದು ಪ್ರಶ್ನಿಸಿದಂತಿದೆ. ಹೌದು ನೀ ನನಗೆ ಮರಳಿ ಸಿಕ್ಕಿದ್ದಿಯಾ. ನಿನ್ನನ್ನು ನಾನು ಸದಾ ಪ್ರೀತಿಸುತ್ತೇನೆ ಎಂದು ಬರೆದಿದ್ದು, ಇದಕ್ಕು ಮೇಘನಾ ರಾಜ್ ಕೂಡ ಲೈಕ್ ಒತ್ತಿದ್ದಾರೆ.

ಪನ್ನಗಾಭರಣ ಜ್ಯೂನಿಯರ್ ಚಿರು ಜೊತೆ ಹಾಕಿರೋ ಪೋಸ್ಟ್ ಗೆ ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಒತ್ತಿದ್ದು, ಕಮೆಂಟ್ ಮಾಡಿ ತಮ್ಮ ಪ್ರೀತಿ ತೋರಿದ್ದಾರೆ.

ಇತ್ತೀಚಿಗೆ ನಡೆದ ಚಿರು ಸರ್ಜಾ ಒಂದು ವರ್ಷದ ಪುಣ್ಯಸ್ಮರಣೆಯಲ್ಲೂ ಪನ್ನಗಾಭರಣ ಪಾಲ್ಗೊಂಡಿದ್ದರು.

ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ  ಪನ್ನಗಾಭರಣ ಹಾಗ ಚಿರು ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದಾರೆ. ಚಿರು ಜೊತೆಗಿನ ತಮ್ಮ ನೆನಪನ್ನು ಪೋಟೋಗಳ ರೂಪದಲ್ಲಿ ಸದಾ ಹಂಚಿಕೊಳ್ಳುವ ಪನ್ನಗಾಭರಣ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ.

RELATED ARTICLES

Most Popular