ಬೆಂಗಳೂರು : ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶದೆಲ್ಲೆಡೆ ಲಾಕ್‌ಡೌನ್ 4.0 ಜಾರಿ ಮಾಡಲಾಗಿದೆ. ಇದೀಗ ನಾಲ್ಕನೇ ಹಂತದ ಲಾಕ್‌ಡೌನ್ ಮೇ 31ರ ವೆರೆಗೂ ವಿಸ್ತರಣೆಯಾಗಿದ್ದು, ಹಲವು ನಿಯಮಗಳನ್ನ ಸಡಿಲಿಕೆ ಮಾಡಲಾಗಿದೆ. ಇಂದು ಲಾಕ್‌ಡೌನ್ ಮಾರ್ಗಸೂಚಿ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಕರ್ನಾಟಕ ಜನಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ :
ಕೊರೊನಾ ಲಾಕ್‌ಡೌನ್‌ನಿಂದ ಸಂಚಾರ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿಗೆ ಷರತ್ತು ಬದ್ಧ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಅಂತರ್‌ಜಿಲ್ಲೆಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, 1 ಬಸ್‌ನಲ್ಲಿ ಕೇವಲ 30 ಮಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಬಸ್‌ನಲ್ಲಿ ಹೋಗುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ..?
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ, ನೈರುತ್ಯ ಸಾರಿಗೆ ಬಸ್ ಸಂಚಾರ, ಖಾಸಗಿ ಬಸ್ ಗಳ ಸಂಚಾರಕ್ಕೂ ಅವಕಾಶ. ಆಟೋ, ಟ್ಯಾಕ್ಸಿಯಲ್ಲಿ ಡ್ರೈವರ್ ಬಿಟ್ಟು ಇಬ್ಬರಿಗೆ ಅವಕಾಶ, ಮ್ಯಾಕ್ಸಿ ಕ್ಯಾಬ್ ಗಳಲ್ಲಿ ಡ್ರೈವರ್ ಬಿಟ್ಟು ಮೂರು ಜನರಿಗೆ ಅವಕಾಶ, ಟ್ರೈನ್ ಗಳು ನಮ್ಮ ರಾಜ್ಯದಲ್ಲಿ ಮಾತ್ರ ಸಂಚಾರ, ಸಲೂನ್ ಶಾಪ್ ತೆರೆಯಲು ಅವಕಾಶ, ಪಾರ್ಕ್ ಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 9 ಗಂಟೆ ವರೆಗೆ ಓಡಾಟ, ಕಂಟೋನ್ಮೆಂಟ್ ಹೊರತುಪಡಿಸಿ ಎಲ್ಲಾ ಕಡೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ,ಹೋಟೆಲ್ ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ, ಷರತ್ತು ಬದ್ಧವಾಗಿ ಮದುವೆ ಕಾರ್ಯಗಳಿಗೆ ಅವಕಾಶ

ರಾಜ್ಯದಲ್ಲಿ ನಾಳೆಯಿಂದ ಏನು ಇರಲ್ಲ :
ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಭಂಧ, ಜಿಮ್ ತೆರೆಯಲು ಅವಕಾಶ ಇಲ್ಲ, ಪ್ರತೀ ಭಾನುವಾರ ಸಂಪೂರ್ಣ ಲಾಕ್ ಡೌನ್, ಹೊರ ರಾಜ್ಯಗಳಿಂದ ರೈಲು ಸಂಚಾರ ಇಲ್ಲ, ಮಾಲ್,ಸಿನಿಮಾ, ಹೋಟೆಲ್ ಎಂದಿನಂತೆ ಬಂದ್ ಮುಂದುವರಿಕೆ, ಬಾರ್ ಅಂಡ್ ರೆಸ್ಟೊರೆಂಟ್, ಪಬ್ ತೆರೆಯಲು ಅವಕಾಶ ಇಲ್ಲ