ನವದೆಹಲಿ : ವಿಶ್ವದಾದ್ಯಂತ ಹರಡುತ್ತಿರೋ ಕೊರೊನಾ (ಕೋವಿದ್ -19) ವೈರಸ್ ಭಾರತಕ್ಕೂ ಕಾಲಿರಿಸಿದೆ. ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆಯಿರೋ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ಟ್ರಾವೆಲ್ ಅಡ್ವೈಸರಿ ಪ್ರಕಟಿಸಿದ್ದು, ನಾಲ್ಕು ದೇಶಗಳ ವೀಸಾ ರದ್ದು ಮಾಡಿ ಆದೇಶ ಹೊರಡಿಸಿದೆ.

ಮಾರ್ಚ್ 3 ರಂದು ಹೊಸ ಅಡ್ವೈಸರಿಯನ್ನು ಪ್ರಕಟಿಸಿರೋ ಕೇಂದ್ರ ಸರಕಾರ ಹಳೆಯ ಅಡ್ವೈಸರಿಯನ್ನು ರದ್ದುಗೊಳಿಸಿದೆ. ಈ ಮೂಲಕ ಈ ಹಿಂದೆ ನಾಲ್ಕು ದೇಶಗಳಿಗೆ ನೀಡಲಾಗುತ್ತಿದ್ದ ವೀಸಾ ರದ್ದಾಗಿದೆ.

ಪ್ರಮುಖವಾಗಿ ಚೀನಾ, ಇಟಲಿ, ದಕ್ಷಿಣ ಕೋರಿಯಾ ಹಾಗೂ ಜಪಾನ್ ದೇಶಗಳಿಗೆ ವೀಸಾ ರದ್ದು ಮಾಡಿದ್ದು, ಭಾರತಕ್ಕೆ ಇನ್ನೂ ಪ್ರವೇಶಿಸಿದ ವಿದೇಶಿ ಪ್ರಜೆಗಳ ವೀಸಾ ಹಾಗೂ ಇ- ವೀಸಾಗಳನ್ನೂ ಅಮಾನತ್ತು ಮಾಡಲಾಗಿದೆ.

ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಇಟಾಲಿ, ಹಾಂಕ್ ಕಾಂಗ್, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಶ್ಯಾ, ನೇಪಾಳ, ಥಾಯ್ಲ್ಯಾಂಡ್, ಸಿಂಗಪೂರ್, ತೈವಾನ್ ಗಳಿಂದ ಬರುವ ವಿದೇಶಿ ಪ್ರಜೆಗಳು ಅಥವಾ ಭಾರತೀಯರು ಭಾರತ ಪ್ರವೇಶಿಸುವುದಕ್ಕೂ ಮುನ್ನ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಬೇಕೆಂದು ಸರ್ಕಾರ ಆದೇಶಿಸಿದೆ.

ಆದರೆ ಈ ದೇಶಗಳನ್ನು ಪ್ರತಿನಿಧಿಸುವ ವಿಶ್ವಸಂಸ್ಥೆಯ ಅಧಿಕಾರಿಗಳು, ಅಂತರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, ರಾಯಭಾರಿಗಳು, ಒಸಿಐ ಕಾರ್ಡ್ ಹೊಂದಿರುವವರು ಹಾಗೂ ವಿಮಾಯ ಸಿಬ್ಬಂಧಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೊಸ ಅಡ್ವೈಸರಿ ತಿಳಿಸಿದೆ.