ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರಸಂಖ್ಯೆ 904ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 42 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ.

ಬಾಗಲಕೋಟೆಯಲ್ಲಿ 15, ಧಾರವಾಡದಲ್ಲಿ 9, ಹಾಸನದಲ್ಲಿ 5, ಬೆಂಗಳೂರಲ್ಲಿ 3, ಯಾದಗಿರಿಯಲ್ಲಿ 2, ದಕ್ಷಿಣ ಕನ್ನಡ 2 (ಉಡುಪಿ ನಿವಾಸಿಗಳು), ಬೀದರ್, ಚಿಕ್ಕಬಳ್ಳಾಪುರ, ಕಲಬುರಗಿ, ಬಳ್ಳಾರಿಯಲ್ಲಿ ತಲಾ ಒಬ್ಬರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಗ್ರೀನ್ ಝೋನ್ ಜಿಲ್ಲೆಯಲ್ಲಿರುವ ಹಾಸನ, ಉಡುಪಿ ಜಿಲ್ಲೆಯವರಿಗೂ ಇದೀಗ ಕೊರೊನಾ ಸೋಂಕು ವ್ಯಾಪಿಸಿರೋದು ಆತಂಕವನ್ನು ಮೂಡಿಸಿದೆ.