ಲಾಕ್ ಡೌನ್ ಅವಧಿಯಲ್ಲಿ ಜನಸಾಮಾನ್ಯರು ಬದುಕಿಗಾಗಿ ಪರದಾಡುತ್ತಿದ್ದರೇ, ಕೆಲ ನಟಿಮಣಿಯರು ಮಾತ್ರ ತಮ್ಮ ಹಾಟ್ ಹಾಟ್ ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದ ಬಿಸಿಯೇರಿಸುವುದರಲ್ಲಿ ಮಗ್ನರಾಗಿದ್ದಾರೆ. ಇಂತಹುದೇ ಪ್ರಯತ್ನದಲ್ಲಿ ನಟಿ ಮೃದುಲಾ ಭಾಸ್ಕರ್ ಮಾದಕ ಪೋಟೋಗಳು ವೈರಲ್ ಆಗಿದ್ದು,ಯುವಜನತೆಯ ಎದೆಬಡಿತ ತಪ್ಪಿಸುವಂತಿದೆ.

ಪಕ್ಕದ ಮನೆ ಹುಡುಗಿಯಂತೆ ಕಾಣುವ ಅಪ್ಪಟ ಕನ್ನಡತಿ ಮೃದುಲಾ ಭಾಸ್ಕರ್, ಹಿಂದಿ,ಕನ್ನಡ ಹಾಗೂ ಮಲೆಯಾಳಂನಲ್ಲಿ ಗುರುತಿಸಿಕೊಂಡಿದ್ದರು ಹೇಳಿಕೊಳ್ಳುವಂತ ಅವಕಾಶವೇನು ಸಿಕ್ಕಿಲ್ಲ.

ಲಾಕ್ ಡೌನ್ ಹೊತ್ತಿನಲ್ಲೇ ಮನೆಯಲ್ಲೇ ಕುಳಿತಿರೋ ಮೃದುಲಾ ಭಾಸ್ಕರ್ ತಮ್ಮ ಪೋಟೋಶೂಟ್ ಪೋಟೋಗಳನ್ನು ಹಂಚಿಕೊಂಡಿದ್ದು, ಮೈಚಳಿ ಬಿಟ್ಟು ಪೋಸ್ ಕೊಟ್ಟಿರೋ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಜಿಲೇಬಿಯಂತೆ ಬಿಕರಿಯಾಗ್ತಿವೆ.

ಟೂ ಪೀಸ್ ಹಾಗೂ ಮೈಮಾಟ ತೋರೋ ಬಟ್ಟೆ ಯಲ್ಲಿ ಸಖತ್ ಹಾಟ್ ಹಾಟ್ ಪೋಸ್ ಗಳಲ್ಲಿ ಮೃದುಲಾ ಭಾಸ್ಕರ್ ಮಿಂಚಿದ್ದಾರೆ.

ಕಾಡುಮೇಡು, ರಾಯಲ್ ಏನ್ಫಿಲ್ಡ್ ಬೈಕ್ ಸೇರಿದಂತೆ ಹಲವೆಡೆ ನಡೆದ ಪೋಟೋಶೂಟ್ ನ ಪೋಟೋಗಳನ್ನು ಮೃದುಲಾ ಹಂಚಿಕೊಂಡಿದ್ದು, ಅಭಿಮಾನಿಗಳು ನಟಿಯ ಅಂದಕ್ಕೆ ಮಾರುಹೋಗಿದ್ದಾರೆ.

ಸ್ಯಾಂಡಲ್ ವುಡ್ ನ ಬಬ್ಲುಶಾ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಮೃದುಲಾ ಭಾಸ್ಕರ್, 2014 ರಲ್ಲಿ ಬಿಡುಗಡೆಯಾದ ವಲ್ಲಿನಂ ಮೂವಿಯ ಅಭಿನಯದ ಮೂಲಕ ಗಮನಸೆಳೆದಿದ್ದರು.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಐಸ್ ಕ್ರೀಂ-2 ಹಾಗೂ ತಮಿಳು ಚಿತ್ರ ಮರುಮುನೈ ಮತ್ತು ತಿಲಗರ್ ಸಿನಿಮಾಗಳಲ್ಲೂ ಮೃದುಲಾ ನಟಿಸಿದ್ದಾರೆ.

ಭರತನಾಟ್ಯ ನೃತಕಲಾವಿದೆ ಹಾಗೂ ಮಾಡೆಲ್ ಆಗಿರೋ ಮೃದುಲಾ ಹಾಟ್ ಪೋಟೋಗಳನ್ನು ನೀವು ಕಣ್ತುಂಬಿಕೊಳ್ಳಿ.