- Advertisement -
ಬೆಂಗಳೂರು : ಕೊರೊನಾ ವೈರಸ್ ಎಫೆಕ್ಟ್ ಇದೀಗ ಮಸೀದಿಗಳ ಪ್ರಾರ್ಥನೆಗೂ ತಟ್ಟಿದೆ. ಶುಕ್ರವಾರದಂದು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ (ಪ್ರಾರ್ಥನೆ) ಯನ್ನು ಸಲ್ಲಿಸಲಾಗುತ್ತದೆ.

ಆದರೆ ಇನ್ಮುಂದೆ ಮಸೀದಿಗಳಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರವೇ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಸೀದಿಯಲ್ಲಿ ಸಾಮೂಹಿಕ ನಮಾಜ್ ವೇಳೆಯಲ್ಲಿ ಹೆಚ್ಚು ಜನ ಸೇರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿಂದು ಧರ್ಮಗುರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.