ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದ್ರೀಗ ಕೇಂದ್ರ ಸರಕಾರ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಅಗಸ್ಟ್ 31ರ ವರೆಗೂ ದೇಶದಾದ್ಯಂತ ಶಾಲಾ, ಕಾಲೇಜುಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದ್ದು, ನೈಟ್ ಕರ್ಪ್ಯೂ ರದ್ದು ಮಾಡಲಾಗಿದೆ. ಅಲ್ಲದೇ ಮೆಟ್ರೋ ಸಂಚಾರ ಹಾಗೂ ಅಂತರ ರಾಜ್ ಸಂಚಾರಕ್ಕೆ ಅನುಮತಿಯನ್ನು ಕಲ್ಪಿಸಲಾಗಿದೆ.

ಅನ್ ಲಾಕ್ 3.0 ಮಾರ್ಗಸೂಚಿಯಲ್ಲಿ ಶಾಲೆ, ಕಾಲೇಜು, ಟ್ಯೂಷನ್ ಸೆಂಟರ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೂ ತೆರೆಯದಂತೆ ಸೂಚಿಸಿದೆ. ಜಾರಿಯಲ್ಲಿರುವ ನೈಟ್ ಕರ್ಪ್ಯೂವನ್ನು ರದ್ದುಪಡಿಸಲಾಗಿದ್ದು, ಅಗಸ್ಟ್ 5ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ.

ಜಿಮ್ ತೆರೆಯಲು ಕೇಂದ್ರ ಸರಕಾರ ಅನುಮತಿಯನ್ನು ನೀಡಿದೆ. ಕೊರೊನಾ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಅಂತರರಾಜ್ಯ ಸಂಚಾರದ ಮೇಲಿನ ನಿರ್ಬಂಧವನ್ನು ತೆರೆವುಗೊಳಿಸಲಾಗಿದೆ.
ಮೆಟ್ರೋ ಸಂಚಾರ, ಈಜುಕೊಳ, ಮನೋರಂಜನಾ ಪಾರ್ಕ್, ಸಿನಿಮಾ ಥಿಯೇಟರ್, ಬಾರ್, ಆಡಿಟೋರಿಯಂ, ಸಭಾ ಭವನ, ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಕಂಟೈನ್ಮೆಂಟ್ ಝೋನ್ ಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಆಯಾಯ ಜಿಲ್ಲಾಡಳಿತಗಳಿಗೆ ಸೂಚನೆಯನ್ನು ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಳಾಗಿದೆ. 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ಆದೇಶಿಸಲಾಗಿದೆ.
