ಮಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದೆ. ಲಾಕ್ ಡೌನ್ ಆದೇಶವನ್ನು ಮಂಗಳೂರಿನಲ್ಲಿ ಪಾಲನೆ ಮಾಡದ 7 ಮಂದಿಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಜಮೀಸ್, ವಿಮೇಶ್, ಉತ್ತರ ಪ್ರದೇಶದ ಅಮೀರ್ ಹಾಜು ಅನ್ಸಾರಿ, ರಾಜಸ್ಥಾನದ ಬಾಲರಾಮ್ ಚೌದ್ರಿ, ಅಸ್ಸಾಂನ ರಾಹುಲ್ ಪಾಂಡೆ, ಉಳ್ಳಾಲದ ಸಿದ್ದಿಕ್, ತೊಕ್ಕಟ್ಟಿನ ವಿನಯ್ ಬಂಧಿತರರು.

ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರು ನಗರದಲ್ಲಿ ಲಾಕ್ ಡೌನ್ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ವಿನಂತಿಸಿಕೊಂಡಿದ್ದರು. ನಿನ್ನೆ ಸಾರ್ವಜನಿಕರಲ್ಲಿ ವಾರ್ನಿಂಗ್ ಮಾಡಿದ್ದ ನಗರ ಪೊಲೀಸ್ ಆಯುಕ್ತರು ಇಂದು 7 ಮಂದಿಯ ವಿರುದ್ಗ ಪ್ರಕರಣ ದಾಖಲಿಸೋ ಮೂಲಕ ಬಿಸಿಮುಟ್ಟಿಸಿದ್ದಾರೆ.