ಚೆನೈ : ಜನಸಾಮಾನ್ಯರನ್ನು ಕಾಡುತ್ತಿದ್ದ ಕೊರೊನಾ ಮಹಾಮಾರಿ ಇದೀಗ ಜನಪ್ರತಿನಿಧಿಯೋರ್ವರನ್ನು ಬಲಿ ಪಡೆದಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ವೆಸ್ಟ್ ಕ್ಷೇತ್ರದ ಶಾಸಕ ಅನ್ಬಳಗನ್ (61 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಸಕ ಅನ್ಬಳಗನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಜೂನ್ 2ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಅಲ್ಲದೇ ಜೂನ್ 3ರಿಂದಲೂ ಶಾಸಕರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದ ಶಾಸಕ ಅನ್ಬಳಗನ್ ಸಾವನ್ನಪ್ಪಿದ್ದಾರೆ.

ಮೂರು ಬಾರಿ ಚೆನ್ನೈ ವೆಸ್ಟ್ ಕ್ಷೇತ್ರದಿಂದ ಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು. ಕೊರೊನಾ ಮಹಾಮಾರಿಗೆ ಶಾಸಕರು ಬಲಿಯಾಗುತ್ತಿದ್ದಂತೆಯೇ ಕೊರೊನಾ ಸೋಂಕಿನಿಂದ ತತ್ತರಿಸಿರುವ ಚೆನ್ನೈನಲ್ಲೀಗ ಆತಂಕ ಶುರುವಾಗಿದೆ.