ವಾಷಿಂಗ್ಟನ್ : ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ತಲ್ಲಣ ಮೂಡಿಸುತ್ತಿದೆ. ಜಗತ್ತಿನ 213ಕ್ಕೂ ಅಧಿಕ ದೇಸಗಳಲ್ಲಿ ಮಹಾಮಾರಿ ಮರಣ ಮೃದಂಗ ಭಾರಿಸುತ್ತಿದೆ. ಆದ್ರೀಗ ಕೊರೊನಾ ವಿಚಾರದಲ್ಲಿ ಯುವಕರೇ ಹುಷಾರ್ ಆಗಿರಿ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ.
ವಿಶ್ವದಾದ್ಯಂತ ಕೋವಿಡ್ -19 ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿ 6 ತಿಂಗಳು ಕಳೆದಿದೆ. ಇದುವರೆಗೆ ಒಟ್ಟು 17.3 ಮಿಲಿಯನ್ ಜನರನ್ನು ಕೊರೊನಾ ಸೋಂಕು ಬಾಧಿಸಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರ ಪೈಕಿ ಯುವಕರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗಿದ್ದಾರೆ. ಮಾತ್ರವಲ್ಲ ಕೊರೊನಾ ಹೆಮ್ಮಾರಿ ಬಲಿಪಡೆದಿರುವವರ ಸಾಲಿನಲ್ಲಿ ಯುವಕರೇ ಮುಂಚೂಣಿಯಲ್ಲಿದ್ದಾರೆ.

ಹೀಗಾಗಿ ಯುವಕರು ತಮ್ಮನ್ನ ತಾವು ರಕ್ಷಿಸಿಕೊಳ್ಳಿ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೊರೊನಾ ಸೋಂಕಿನಿಂದ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಕಳವಳ ವ್ಯಕ್ತಪಡಿಸಿದೆ.

ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಸಾಮೂದಾಯಿಕ ರೋಗ ನಿರೋಧಕ ಶಕ್ತಿಯಿಂದಷ್ಟೇ ಕೊರೊನಾ ಸೋಂಕನ್ನು ಹೋಗಲಾಡಿಸಲು ಸಾಧ್ಯ. ಹೀಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಬೇಕು. ಯುವಕರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವೆಂದಿದ್ದರು.

ಆದ್ರೀಗ ವಿಶ್ವ ಆರೋಗ್ಯ ಸಂಸ್ಥೆ ಯುವಕರೇ ಹುಷಾರ್ ಆಗಿರಿ ಅಂತಾ ಇರೋದು ಆತಂಕಕ್ಕೆ ಕಾರಣವಾಗಿದೆ. ಆದರೆ ಕೊರೊನಾ ವೈರಸ್ ವಿಚಾರದಲ್ಲಿ ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮಾತ್ರವಲ್ಲ ಕೊರೊನಾ ವೈರಸ್ ಸೋಂಕಿನೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಿ ಎಂದಿದ್ದಾರೆ.