ಬೆಂಗಳೂರು: ನಾವು ಕೊರೊನಾ ಜೊತೆಗೆ ಬದುಕ ಬೇಕಿದೆ. ಸರಕಾರ ಕೊರೊನಾ ತಡೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಜನ ಗಾಬರಿಯಾಗುವ ಅಗತ್ಯ ಇಲ್ಲ. ಹೀಗಾಗಿ ಬೆಂಗಳೂರು ಬಿಡದೇ ಸರ್ಕಾರದ ಜೊತೆ ಸಹಕರಿಸಿ. 450 ಹೆಚ್ಚು ಅಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿದ್ದೇವೆ. ಇನ್ನು 10 ಸಾವಿರ ಬೆಡ್ ವ್ಯವಸ್ಥೆ ಕೂಡ ಮಾಡುತ್ತೇವೆ. ಈ ಮೂಲಕ ಬೆಂಗಳೂರಿನ ಮಹಾಜನತೆಗೆ ಯಾವುದಕ್ಕೂ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದರು.

ಈ ಪಿಡಿಗು ಜೊತೆ ನಾವು ಅನಿವಾರ್ಯವಾಗಿ ಬದುಕಬೇಕಿದೆ. ನಿಮ್ಮ ಬದುಕು ಬಹಳ ಮುಖ್ಯವಾದುದ್ದಾಗಿದೆ. ಜನ ಗಾಬರಿಯಾಗುವುದು ಬೇಡ. ಸರ್ಕಾರ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಜನ ನಮ್ಮೊಂದಿಗೆ ಸಹಕಸುವ ಮೂಲಕ ಕೊರೊನಾ ಜೊತೆ ಹೋರಾಡುವ. ಯಾವುದೇ ಕಾರಣಕ್ಕೂ ಬೆಂಗಳೂರ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.