ಬೆಂಗಳೂರು : ಕಳೆದ ಮೂರು ದಿನಗಳಿಂದ ದಾಖಲೆ ನಿರ್ಮಿಸಿದ್ದ ಕೊರೊನಾ ರಾಜ್ಯಕ್ಕಿಂದು ಕೊಂಚ ರಿಲೀಫ್ ಕೊಟ್ಟಿದೆ. ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ 10 ಕೊರೊನಾ ಪ್ರಕರಣಗಳು ದೃಢಪಟ್ಟಿರುವುದರಿಂದಾಗಿ ರಾಜ್ಯದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ದಾವಣೆಗೆರೆ 3, ಬಾಗಲಕೋಟೆ ಮತ್ತು ಬೀದರ್ ನಲ್ಲಿ ತಲಾ 2, ವಿಜಯಪುರ, ಹಾವೇರಿ ಹಾಗೂ ಕಲಬುರಗಿಯಲ್ಲಿ ತಲಾ 1 ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಬರೋಬ್ಬರಿ 2000 ಮಂದಿಯ ಕೊರೊನಾ ತಪಾಸಣಾ ವರದಿ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದು, ಆತಂಕ ಮೂಡಿಸಿತ್ತು. ಆದ್ರೆ ಬೆಳಗಿನ ಬುಲೆಟಿನ್ ನಲ್ಲಿ ಕೇವಲ 10 ಮಂದಿ ಮಾತ್ರವೇ ಸೋಂಕು ಪತ್ತೆಯಾಗಿದೆ.

ಮೊನ್ನೆ 48, ನಿನ್ನೆ 56 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ ಇಂದು ಕೇವಲ 10 ಮಂದಿಗೆ ಮಾತ್ರವೇ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.