ಬೆಂಗಳೂರು : ದಿನ ಕಳೆದಂತೆ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಲೇ ಇದೆ. ಇಂದು ಕೊರೊನಾ ಸೋಂಕು ಹೊಸ ದಾಖಲೆಯನ್ನು ಬರೆದಿದ್ದು, ಒಂದೇ ದಿನ ಬರೋಬ್ಬರಿ 6,128 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಇಂದು ಕೂಡ 2 ಸಾವಿರದ ಗಡಿದಾಟಿದ್ದು, ಸಿಲಿಕಾನ್ ಸಿಟಿಯಲ್ಲಿ 2,233 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು, 430, ಬಳ್ಳಾರಿ 343, ಉಡುಪಿ 248, ಬೆಂಗಳೂರು ಗ್ರಾಮಾಂತರ 224, ಕಲಬುರ್ಗಿ 220, ಬೆಳಗಾವಿ 202, ದಕ್ಷಿಣ ಕನ್ನಡ 198, ಧಾರವಾಡ 180, ರಾಯಚೂರು 166, ಶಿವಮೊಗ್ಗ 143, ಬಾಗಲಕೋಟೆ ಮತ್ತು ಚಿಕ್ಕಮಗಳೂರು 126, ವಿಜಯಪುರ 124, ಉತ್ತರ ಕನ್ನಡ 120, ರಾಮನಗರ 106, ತುಮಕೂರು 104, ಹಾಸನ 94, ಗದಗ 88, ಮಂಡ್ಯ 87, ದಾವಣಗೆರೆ 86, ಚಿಕ್ಕಬಳ್ಳಾಪುರ 82, ಕೊಪ್ಪಳ 78, ಬೀದರ್ 69, ಯಾದಗಿರಿ ಮತ್ತು ಹಾವೇರಿ 58, ಚಿತ್ರದುರ್ಗ 47, ಕೋಲಾರ ಮತ್ತು ಚಾಮರಾಜನಗರ 32 ಹಾಗೂ ಕೊಡಗು 24 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದ್ದು, ಇದುವರೆಗೆ 46,694 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 69,700 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನೊಂದೆಡೆ ಕಿಲ್ಲರ್ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿಂದ 83 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.


