ಕರಾವಳಿಗೆ ಕೊರೊನಾ ಶಾಕ್ : ಕಡ್ಡಾಯ ಕ್ವಾರಂಟೈನ್ ಗೆ ದ.ಕ. ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಿದ ಶಾಸಕರು ಯಾರು ?

0

ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಬಿಗ್ ಶಾಕ್ ಕೊಟ್ಟಿದೆ. ವಿದೇಶದಿಂದ ಬಂದಿದ್ದ ಬರೋಬ್ಬರಿ 15 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದ್ರೆ ವಿದೇಶದಿಂದ ಆಗಮಿಸಿದವರನ್ನು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಿಸೋದಕ್ಕೆ ಜಿಲ್ಲಾಡಳಿತಕ್ಕೆ ಗೊಂದಲ ಸೃಷ್ಟಿಸಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾತ್ರವಲ್ಲ ಗೊಂದಲ ಸೃಷ್ಟಿಯ ಹಿಂದೆ ಜಿಲ್ಲೆಯ ಶಾಸಕರೊಬ್ಬರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಮಾರ್ಚ್ 12ರಂದು ವಿಮಾನದಲ್ಲಿ ಬಂದ ಕರಾವಳಿಗರನ್ನು ಕಡ್ಡಾಯ ವಾರಂಟಿ ಗೆ ಜಿಲ್ಲಾಡಳಿತ ಪ್ರಯತ್ನ ನಡೆಸಿತ್ತು. ಹೋಟೆಲ್ ರೂಮು ಗಳು ಸಿದ್ಧವಾಗಿದ್ದವು. ಆದರೆ ಅಧಿಕಾರಿಗಳ ಈ ಪ್ರಯತ್ನಕ್ಕೆ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರು ತಡೆಯೊಡ್ಡಿ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆಂಬ ಅಂಶ ಬಹಿರಂಗವಾಗಿದೆ.

ವಿದೇಶದಿಂದ ಬಂದವರನ್ನು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಿಸುವ ಕುರಿತು ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದರು. ಆದರೆ ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ವಿವಿಧ ಹೇಳಿಕೆ, ಪ್ರತಿಭಟನೆಯ ಬೆದರಿಕೆಯ ಮೂಲಕ ಜಿಲ್ಲಾಡಳಿತದ ನಡುವೆ ಗೊಂದಲ ಸೃಷ್ಟಿಸಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಇಂದು ಜಿಲ್ಲೆಯಲ್ಲಿ 15 ಕೊರೊನಾ ಪ್ರಕರಣ ಬಯಲಾಗುತ್ತಲೇ ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಅಧಿಕಾರಿಗಳನ್ನು ಪ್ರಚಾರದ ನೆಪದಲ್ಲಿ ಭೇಟಿ ಮಾಡುವ ಕೆಲವು ನಾಯಕರುಗಳು ಅನಗತ್ಯವಾಗಿ ಅಧಿಕಾರಿಗಳ ಕೆಲಸ ಕಾರ್ಯದ ಮೇಲೆ ಪರೋಕ್ಷ ಒತ್ತಡ ತಂದು ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ತಮ್ಮ ಕಾರ್ಯ ಕಾರ್ಯದಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಈ ವಿಪತ್ತಿನ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಪ್ರಚಾರದ ಸಲುವಾಗಿ ಒತ್ತಡಗಳನ್ನು ತರಬಾರದು ಎನ್ನುತ್ತಾರೆ ಸಾರ್ವಜನಿಕರು.

ವಿದೇಶದಿಂದ ಆಗಮಿಸಿದವರ ಬೇಡಿಕೆಗಳನ್ನು ದೊಡ್ಡದು ಮಾಡಿ ಅಧಿಕಾರಿಗಳ ಕಾರ್ಯನಿರ್ವಹಣೆ ಮೇಲೆ ಪ್ರಭಾವ ಬೀರಿರೋದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಪರಿಣಾಮ ಎದುರಾಗಿದೆ. ಕೊರೊನಾ ವಿಪತ್ತಿನಲ್ಲಿರುವ ಈ ಸಂದರ್ಭದಲ್ಲಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಸಣ್ಣಪುಟ್ಟ ಲೋಪಗಳನ್ನೇ ಎತ್ತಿ ಹಿಡಿದು ಅಡ್ಡಿಪಡಿಸುವುದು ಎಷ್ಟು ಸರಿ. ಇದೀಗ ವಿದೇಶದಿಂದ ಮರಳಿದ 21 ಮಂದಿಗೆ ಕೊರೊನಾ ಸೋಂಕು ದೃಢಪಟ್ಜಿದೆ. ಜಿಲ್ಲಾಡಳಿತ ವಿದೇಶದಿಂದ ಬಂದವರನ್ನು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಮನೆಗೆ ಕಳುಹಿಸಿದ್ರೆ ನಿಜಕ್ಕೂ ದೊಡ್ಡ ಮಟ್ಟ ಬೆಲೆತೆರೆಬೇಕಾಗುತ್ತಿತ್ತು. ಇನ್ನಾದ್ರೂ ಶಾಸಕರು ಪ್ರಚಾರವನ್ನು ಕೈಬಿಟ್ಟು ಕೊರೊನಾ ವಿರುದ್ದದ ಹೋರಾಟಕ್ಕೆ ಕೈ ಜೋಡಿಸಬೇಕಾದ ಅನಿವಾರ್ಯತೆಯಿದೆ.

Leave A Reply

Your email address will not be published.