ನವದೆಹಲಿ : ವ್ಯವಹಾರಕ್ಕೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸೋ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳು ಮಾರ್ಚ್ 16 ರಿಂದ ನಿಷ್ಕ್ರೀಯವಾಗುತ್ತೆ ಅಂತಾ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ನಿಮ್ಮ ಬಳಿಯಲ್ಲಿರೋ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಇದುವರೆಗೂ ನೀವು ಆನ್ ಲೈನ್ ವ್ಯವಹಾರಕ್ಕೆ ಒಮ್ಮೆಯೂ ಬಳಕೆ ಮಾಡದೇ ಇದ್ದಿದ್ದಲ್ಲಿ ಅಂತಹ ಕಾರ್ಡ್ ಗಳನ್ನು ರದ್ದು ಮಾಡಲು ಆರ್ ಬಿಐ ಸೂಚಿಸಿದೆ. ಆರ್ ಬಿಐ ದೇಶದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಡಿಜಿಟಲ್ ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಆರ್ ಬಿಐ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಆನ್ ಲೈನ್ ವಹಿವಾಟು ನಡೆಸದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ನಿಷ್ಕ್ರೀಯಗೊಳಿಸುವ ನಿಯಮ ಕೂಡ ಒಂದು.

ಕಾರ್ಡುಗಳು ನಿಷ್ಕ್ರೀಯಗೊಂಡಿರುವ ಕುರಿತು ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿಯನ್ನು ನೀಡಬೇಕು. ಅಲ್ಲದೇ ನಿಷ್ಕ್ರೀಯಗೊಳ್ಳುವ ಕಾರ್ಡುಗಳ ಹಣವನ್ನು ವಾಪಾಸು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲ ಇದುವರೆಗೂ ಆನ್ ಲೈನ್ ವಹಿವಾಟು ನಡೆಸದ ಗ್ರಾಹಕರು ಬ್ಯಾಂಕಿಗೆ ತೆರಳಿ ಮಾಹಿತಿ ಪಡೆಯುವಂತೆಯೂ ಆರ್ ಬಿಐ ಸೂಚಿಸಿದೆ.