ಮಂಗಳವಾರ, ಜೂನ್ 17, 2025
HomeBreakingDeworming Problem Solution:ಪದೇ ಪದೇ ಕಾಡುತ್ತಿರುವ ಜಂತು ಹುಳು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

Deworming Problem Solution:ಪದೇ ಪದೇ ಕಾಡುತ್ತಿರುವ ಜಂತು ಹುಳು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

- Advertisement -

(Deworming Problem Solution)ಯಾವಾಗಲು ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ರಾಸ್ಟಿಕ್‌ ಆಗಿ ವಾಂತಿ ಆಗುವುದು, ಹೊಟ್ಟೆ ಆಗಾಗ ನೋವಾಗುತ್ತಿದ್ದರೆ ಮತ್ತು ಮುಖದ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವುದು ಈ ಲಕ್ಷಣಗಳು ಕಂಡು ಬಂದರೆ ಜಂತು ಹುಳುಗಳು ಆಗಿರುವ ಸೂಚನೆ . ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಜಂತು ಹುಳು ಸಮಸ್ಯೆ ಆದಾಗ ಮಾತ್ರೆ ಕೊಡುತ್ತಾರೆ. ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಆದಾಗ ಮಾತ್ರೆ ತೆಗೆದುಕೊಂಡರು ಅಷ್ಟು ಪರಿಣಾಮವಾಗಿ ಕೆಲಸ ಮಾಡುವುದಿಲ್ಲ .ಹಾಗಾಗಿ ಈ ಜಂತು ಹುಳು ನಿವಾರಣೆಗೆ ಮನೆಮದ್ದು ಮಾಡಿಕೊಂಡು ಕುಡಿದರೆ ಉತ್ತಮ. ಜಂತು ಹುಳು ನಿವಾರಣೆ ಮಾಡಲು ಮನೆಮದ್ದು ಹೇಗೆ ಮಾಡುವುದು ಎಂಬ ಮಾಹಿತಿ ತಿಳಿಯೋಣ.

(Deworming Problem Solution)ಬೇಕಾಗುವ ಸಾಮಾಗ್ರಿಗಳು:

  • ಬೇವಿನ ಎಲೆ
  • ಜೀರಿಗೆ
  • ಕಾಳು ಮೆಣಸು
  • ಉಪ್ಪು
  • ಬೆಳ್ಳುಳ್ಳಿ

ಮಾಡುವ ವಿಧಾನ
ಮಿಕ್ಸಿ ಜಾರಿಯಲ್ಲಿ ಬೇವಿನ ಎಲೆ, ಒಂದು ಚಮಚ ಜೀರಿಗೆ, ಹತ್ತು ಕಾಳು ಮೆಣಸು, ಉಪ್ಪು ಸ್ವಲ್ಪ, ಒಂದು ಬೆಳ್ಳುಳ್ಳಿ, ಅರ್ಧಲೋಟ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಲೋಟದಲ್ಲಿ ಸೊಸಿಕೊಂಡು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿದರೆ ಜಂತು ಹುಳುವಿನ ಸಮಸ್ಯೆ ಕಡಿಮೆ ಆಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಕುಡಿಯಲು ಕೊಡಬಹುದು. ಸಣ್ಣ ಲೋಟದಲ್ಲಿ ಅರ್ಧ ಕೊಟ್ಟರೆ ಜಂತು ಹುಳು ಸಮಸ್ಯೆ ನಿವಾರಣೆ ಆಗುತ್ತದೆ.

ಬೇವಿನ ಎಲೆಗೆ ಸ್ವಲ್ಪ ಇಂಗು ಹಾಕಿ ತಿನ್ನುವುದರಿಂದ ಕೂಡ ಜಂತು ಹುಳು ಸಮಸ್ಯೆ ಕಡಿಮೆ ಆಗುತ್ತದೆ.

ಪಪ್ಪಾಯಿ ಬೀಜ

ಒಂದು ಚಮಚ ಪಪ್ಪಾಯ ಬೀಜವನ್ನು ಸೇವನೆ ಮಾಡುವುದರಿಂದ ಜಂತು ಹುಳು ಸಮಸ್ಯೆ ನಿವಾರಣೆ ಆಗುತ್ತದೆ. ಬರಿ ಪಪ್ಪಾಯ ಬೀಜವನ್ನು ತಿನ್ನಲು ಇಷ್ಟ ಪಡದವರು ಇದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ಅದಕ್ಕೆ ಸಕ್ಕರೆ ಸೇರಿಸಿ ತಿನ್ನುವುದರಿಂದ ಜಂತು ಹುಳು ಸಮಸ್ಯೆ ಕಡಿಮೆ ಆಗುತ್ತದೆ.

ನುಗ್ಗೆಕಾಯಿ ಹೂವು
ನುಗ್ಗೆಕಾಯಿ ಹೂವನ್ನು ಕುಟ್ಟಣಿಗೆಯಲ್ಲಿ ಚೆನ್ನಾಗಿ ಜಜ್ಜಿ ಅದರ ರಸವನ್ನು ಕುಡಿಯುವುದರಿಂದ ಜಂತು ಹುಳುಗಳು ಕಡಿಮೆ ಆಗುತ್ತದೆ.

ಸಿಹಿ ಕುಂಬಳಕಾಯಿ
ಸಿಹಿ ಕುಂಬಳಕಾಯಿಯನ್ನು ಜಜ್ಜಿಕೊಂಡು ರಸವನ್ನು ತೆಗೆದು ಅದನ್ನು ಕುಡಿಯುವುದರಿಂದ ಜಂತು ಕಡಿಮೆ ಆಗುತ್ತದೆ.

ಓಮದ ಕಾಳು(ಅಜವಾನ)
ಓಮದ ಜೊತೆ ಸ್ವಲ್ಪ ಬೆಲ್ಲ ಸೇರಿಸಿಕೊಂಡು ತಿನ್ನುವುದರಿಂದ ಜಂತು ಹುಳುಗಳು ನಾಶವಾಗುತ್ತದೆ.

ಇದನ್ನೂ ಓದಿ:Doddapatre Gojju Recipe:ಮನೆಯ ಹಿತ್ತಲಲ್ಲಿ ಬೆಳೆಯುವ ದೊಡ್ಡ ಪತ್ರೆಯ ಗೊಜ್ಜು ಮಾಡುವುದು ಹೇಗೆ?

ಇದನ್ನೂ ಓದಿ:Knee Pain Tips:ವಿಪರೀತ ಮಂಡಿ ನೋವಿದ್ದರೆ ಈ ಪಾನಿಯಾ ಟ್ರೈ ಮಾಡಿ

ತುಳಸಿ ಎಲೆ
ಕುಟ್ಟಣಿಗೆಯಲ್ಲಿ ಆರು ತುಳಸಿ ಎಲೆಯನ್ನು ಜಜ್ಜಿಕೊಂಡು ರಸ ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸ ಹಾಕಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಜಂತು ಸಮಸ್ಯೆ ಕಡಿಮೆ ಆಗುತ್ತದೆ.

Deworming Problem Solution Here is the solution deworming problem that is bothering you repeatedly

RELATED ARTICLES

Most Popular