ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಸರಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಯಾವುದೇ ಕಾರಣಕ್ಕೂ ಜನರನ್ನು ಸೇರಿಸುವಂತಿಲ್ಲಾ. ಆದರೆ ಕಾರ್ಯಕ್ರಮವನ್ನು ಯಾವಾಗ ಬೇಕಾದ್ರೂ ಮಾಡಿಕೊಳ್ಳಿ ಅನ್ನೋ ಷರತ್ತು ವಿಧಿಸಿ, ಸಿಎಂ ಯಡಿಯೂರಪ್ಪ ಅನುಮತಿಯನ್ನು ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಜೂನ್ 14ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕುರಿತು ಪದಗ್ರಹಣ ಸಮಾರಂಭ ನಡೆಸುವುದಕ್ಕೆ ಅನುಮತಿಯನ್ನು ಕೋರಿದ್ದರು. ಆದರೆ ರಾಜ್ಯ ಸರಕಾರ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಾರಂಭ ನಡೆಸುವುದಕ್ಕೆ ಅನುಮತಿಯನ್ನು ನೀಡಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಮಾತ್ರವಲ್ಲ ಕಾಂಗ್ರೆಸ್ ನಾಯಕರು ಕಾನೂನಿನ ಮೊರೆ ಹೋಗುವುದಾಗಿಯೂ ಎಚ್ಚರಿಸಿದ್ದರು.

ಬಿಜೆಪಿ ಸರಕಾರ ಪದಗ್ರಹಣ ಸಮಾರಂಭದ ನೆಪದಲ್ಲಿ ರಾಜಕೀಯ ನಡೆಸುತ್ತಿದೆ ಅನ್ನುವ ಆರೋಪವನ್ನು ಮಾಡಲಾಗಿತ್ತು. ಆದ್ರೀಗ ಸರಕಾರ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಿದೆ.