ಬೆಂಗಳೂರು : ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾ ನಟ, ನಟಿಯರ ಮುಖವಾಡವನ್ನು ಕಳಚುತ್ತಿದೆ. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಡ್ರಗ್ಸ್ ಧಂದೆಯಲ್ಲಿ ತೊಡಗಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಮಾತ್ರವಲ್ಲ ರಾಗಿಣಿ ಆಪ್ತ ಜಯನಗರ ಆರ್ ಟಿಓ ಅಧಿಕಾರಿ ರವಿಶಂಕರ್ ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದ್ದ ಹೇಳಿಕೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಸೃಷ್ಟಿಸಿದೆ. ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ನಟಿ ರಾಗಿಣಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಯಲ್ಲಿ ವಿಚಾರಣಗೆ ಹಾಜರಾಗುವಂತೆ ಸೂಚನೆಯನ್ನು ಕೊಟ್ಟಿದ್ದಾರೆ.

ಈ ನಡುವಲ್ಲೇ ರಾಗಿಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರವಿಶಂಕರ್ ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಹಲವು ಅನುಮಾನಗಳಿಗೆ ಪುಪ್ಟಿ ನೀಡುತ್ತಿದೆ.

ರಾಗಿಣಿ ತನ್ನ ಗೆಳೆಯನಾಗಿರುವ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಜೊತೆಗೆ ಪಾರ್ಟಿ ಮಾಡುತ್ತಿದ್ದ ವೇಳೆಯಲ್ಲಿ ಆರ್ ಟಿಓ ಅಧಿಕಾರಿ ರವಿಶಂಕರ್ 2019ರಲ್ಲಿ ಕಿರಿಕ್ ಮಾಡಿದ್ದ. ಅಲ್ಲದೇ ಖಾಸಗಿ ಹೋಟೆಲ್ ರಿಟ್ಜ್ ಕಾಲ್ರ್ ಟನ್ ನಲ್ಲಿ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದರು. ಘಟನೆಯ ನಂತರದಲ್ಲಿ ರವಿ ಶಂಕರ್ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡು ಶಿವಪ್ರಕಾಶ್ ವಿರುದ್ದ ಅಶೋಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನಂತರದಲ್ಲಿ ಪೊಲೀಸರು ಶಿವಪ್ರಕಾಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆಯಲ್ಲಿ ರಾಗಿಣಿ ಗಲಾಟೆಗೂ ತನಗೂ ಸಂಬಂಧವೇ ಇಲ್ಲಾ ಎಂದಿದ್ದರು. ಆದ್ರೀಗ ರವಿ ಶಂಕರ್ ಅವರನ್ನು ಸಿಸಿಬಿ ಅಧಿಕಾರಿಗಳು ಡ್ರಗ್ಸ್ ವಿಚಾರಕ್ಕೆ ಬಂಧನ ಮಾಡಿದ್ದು, ನಟಿ ರಾಗಿಣಿಗೂ ನೋಟಿಸ್ ನೀಡಲಾಗಿದೆ.