ಹೈದ್ರಾಬಾದ್ : ಯುವನೋರ್ವನ ಕಿರುಕುಳಕ್ಕೆ ಬೇಸತ್ತು ಖ್ಯಾತ ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ವರ್ಷಗಳಿಂದಲೂ ತೆಲುಗು ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಶ್ರಾವಣಿ ಇಂದು ಹೈದ್ರಾಬಾದ್ ನ ಮಧುರನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾತ ಕಿರುತೆರೆ ನಟಿಯಾಗಿದ್ದ ಶ್ರಾವಣಿಗೆ ಟಿಮ್ ಟಾಕ್ ಮೂಲಕ ದೇವರಾಜ್ ರೆಡ್ಡಿ ಎಂಬಾತನ ಪರಿಚಯವಾಗಿತ್ತು.

ನಂತರದಲ್ಲಿ ದೇವರಾಜ ರೆಡ್ಡಿ ಶ್ರಾವಣಿಗೆ ಕಿರುಕುಳ ನೀಡೋದಕ್ಕೆ ಶುರು ಮಾಡಿದ್ದ. ಇದೇ ಕಾರಣದಿಂದಲೇ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಶ್ರಾವಣಿ ಪೋಷಕರು ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.