ಭಾನುವಾರ, ಏಪ್ರಿಲ್ 27, 2025
HomeBreakingYSV Datta: ಮಹಿಳೆಯರ ಬಗ್ಗೆ ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿರಲಿ…! ಎಚ್ಡಿಕೆಗೆ ದತ್ತಾ ಪಾಠ…!!

YSV Datta: ಮಹಿಳೆಯರ ಬಗ್ಗೆ ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿರಲಿ…! ಎಚ್ಡಿಕೆಗೆ ದತ್ತಾ ಪಾಠ…!!

- Advertisement -

ಮಹಿಳೆಯರ ಕುರಿತು ಮಾತನಾಡುವ ಭಾಷೆಯ ಮೇಲೆ ಹಿಡಿತವಿರಲಿ ಹಾಗೂ ಪದಬಳಕೆಯ ಬಗ್ಗೆ ಗಮನವಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ  ಜೆಡಿಎಸ್ ಮುಖಂಡ ವೈಎಸ್ವಿದತ್ತಾ ಸಭ್ಯತೆಯ ಪಾಠ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವೈ.ಎಸ್.ವಿ.ದತ್ತಾ, ಕನ್ನಡ ಶ್ರೀಮಂತ ಭಾಷೆ. ಇಲ್ಲಿ ಒಳ್ಳೊಳ್ಳೆ ಪದಗಳಿವೆ. ಅವುಗಳನ್ನು ಬಳಸಿ ಸಭ್ಯತೆಯ ಚೌಕಟ್ಟಿನಲ್ಲಿ ರಾಜಕಾರಣದ ಟೀಕೆಗಳನ್ನು ಮಾಡಲು ಅವಕಾಶವಿದೆ ಎಂದಿದ್ದಾರೆ.

ಅಲ್ಲದೇ ಸಂಸದೆ ಸುಮಲತಾ ಬಗ್ಗೆ ಕುಮಾರಸ್ವಾಮಿ ನೀಡಿದ ಅಸ್ಮೂಕ್ಷ ಹೇಳಿಕೆ ಬಗ್ಗೆ ನನ್ನ ಆಕ್ಷೇಪವಿದೆ ಎಂದಿರುವ ವೈ.ಎಸ್.ವಿ.ದತ್ತಾ, ಎಲ್ಲ ರಾಜಕಾರಣಿಗಳು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಉತ್ತಮ ಭಾಷಾ ಪ್ರಯೋಗದಿಂದ  ರಾಜಕಾರಣಿಗಳು ಮಾದರಿಯಾಗಬೇಕೆಂದು  ದತ್ತಾ ಅಭಿಪ್ರಾಯಿಸಿದ್ದಾರೆ.

ಸುಮಲತಾ ಅವರನ್ನು ಕೆ.ಆರ್.ಎಸ್. ಗೆ ಅಡ್ಡಲಾಗಿ ಮಲಗಿಸಬೇಕೆಂಬ ಹೇಳಿಕೆ ವಿಚಾರ, ಕೆ.ಆರ್.ಎಸ್ ಕಾವಲಿಗೆ ಸುಮಲತಾ ಅವರನ್ನೇ ನೇಮಿಸಬೇಕೆಂಬ ಅರ್ಥದಲ್ಲಿ ಕುಮಾರಸ್ವಾಮಿಯವರು ಮಾತನಾಡಿದ್ದಾರೆ ಎಂದು ದತ್ತಾ ಸಮರ್ಥಿಸಿಕೊಂಡಿದ್ದಾರೆ.

ಆದರೆ ರಾಜಕಾರಣಿಗಳು ಸಂವೇಧನಾಶೀಲತೆಯಿಂದ ಯೋಚಿಸಿ ಪದ ಬಳಕೆ ಮಾಡುತ್ತಿಲ್ಲ.ಇದು ತಪ್ಪು. ಪದ ಬಳಕೆಯ ಬಗ್ಗೆ ಗಮನವಿರಲಿ. ನಮ್ಮನ್ನು ಸಮಾಜ ಗಮನಿಸುತ್ತದೆ ಎಂಬುದು ಅರಿವಿರಬೇಕೆಂದು ದತ್ತಾ ಪರೋಕ್ಷವಾಗಿ ಎಚ್ಡಿಕೆಗೆ ಬುದ್ಧಿ ಮಾತು ಹೇಳಿದ್ದಾರೆ.

RELATED ARTICLES

Most Popular