ಬೆಂಗಳೂರು : ಸಿಲಿಕಾನ್ ಸಿಟಿಯ ಪಿಜಿಯೊಂದರ ಮುಂಭಾಗದಲ್ಲಿ ಯುವತಿಯ ಮೇಲೆ ಗುಂಡಿನ ದಾಳಿ ನಡೆದಿದೆ. 7.65 ಕಂಟ್ರಿ ಮೇಡ್ ಪಿಸ್ತೂಲ್ ನಿಂದ ದಾಳಿ ನಡೆಸಲಾಗಿದ್ದು, ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಎರಡು ತಂಡ ರಚಿಸಿದ್ದಾರೆ.
ಬೆಂಗಳೂರಿನ ಮಂಜುನಾಥ ಲೇಔಟ್ ನಲ್ಲಿರುವ ಮಹಿಳೆಯ ಪಿಜಿಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಒಡಿಶಾ ಮೂಲದ ಶುಭಶ್ರೀ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ದುಷ್ಕರ್ಮಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾರತಹಳ್ಳಿ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ಎರಡು ತಂಡವನ್ನು ರಚಿಸಿದ್ದಾರೆ. ಇನ್ನು ಗುಂಡು ಹಾರಿಸಿದ ವ್ಯಕ್ತಿ ಶುಭಶ್ರೀಗೆ ಪರಿಚಿತನಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಲ್ಲಿ ಯುವತಿಯ ಮೇಲೆ ಗುಂಡಿನ ದಾಳಿ
- Advertisement -